ನ್ಯಾಯಾಂಗದ ವಶಕ್ಕೆ ಶಶಿಕಲಾ ಪತಿ

7

ನ್ಯಾಯಾಂಗದ ವಶಕ್ಕೆ ಶಶಿಕಲಾ ಪತಿ

Published:
Updated:

ಚೆನ್ನೈ: ಮುಖ್ಯಮಂತ್ರಿ ಜಯಲಲಿತಾ ಅವರ ಮಾಜಿ ಗೆಳತಿ ಶಶಿಕಲಾ ಅವರ ಪತಿ ಎಂ. ನಟರಾಜನ್ ಅವರನ್ನು ಪೊಲೀಸರು  ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಧೀಶರು ಅವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶಿಸಿದರು. ಅವರನ್ನು ಭೂಕಬಳಿಕೆ ಆಪಾದನೆಗಾಗಿ ಬಂಧಿಸಲಾಗಿತ್ತು.

ಬಸಂತ್ ನಗರದ  ನಿವಾಸಕ್ಕೆ ಬಂದ ತಂಜಾವೂರು ಪೊಲೀಸರು ಶನಿವಾರ  ನಟರಾಜನ್ ಅವರನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆಗೆ ತಂಜಾವೂರಿಗೆ ಕರೆದುಕೊಂಡು ಹೋಗಿದ್ದರು.

ತಂಜಾವೂರಿನ ರಾಮಲಿಂಗಮ್ ಎನ್ನುವವರು ಭೂಕಬಳಿಕೆಯ ಬಗ್ಗೆ ನಟರಾಜನ್ ವಿರುದ್ಧ ದೂರು ಸಲ್ಲಿಸಿದ್ದರು.

`ಶಶಿಕಲಾ ಸಾಕ್ಷಿ; ನಾಟಕ~

ತಿರುಚಿರಾಪಳ್ಳಿ (ಪಿಟಿಐ): ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ ಅವರು ಬೆಂಗಳೂರು ನ್ಯಾಯಾಲಯದಲ್ಲಿ ಸಾಕ್ಷಿ ನೀಡಿರುವುದು `ರಾಜಕೀಯ ನಾಟಕ~ ಎಂದು ಡಿಎಂಕೆ ಮುಖಂಡ ಎಂ. ಕರುಣಾನಿಧಿ ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry