ನ್ಯಾಯಾಂಗ ಬಂಧನ

6

ನ್ಯಾಯಾಂಗ ಬಂಧನ

Published:
Updated:

ಹೈದರಾಬಾದ್ (ಪಿಟಿಐ): ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಗಾಲಿ ಜನಾರ್ದನ ರೆಡ್ಡಿ ಅವರ ಆಪ್ತ ಸಹಾಯಕ ಮೆಹ್‌ಫುಜ್ ಅಲಿ ಖಾನ್ ಅವರನ್ನು ವಿಶೇಷ ಸಿಬಿಐ ನ್ಯಾಯಾಲಯವು ಇದೇ  17ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ಬೆಂಗಳೂರು ಪೊಲೀಸರು ಖಾನ್ ಅವರನ್ನು ಸಿಬಿಐ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಅ. 8ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ.ಖಾನ್ ಅವರನ್ನು ತನ್ನ ಮುಂದೆ ಹಾಜರುಪಡಿಸುವಂತೆ ಸೆಪ್ಟೆಂಬರ್ 25ರಂದು ಸಿಬಿಐ ಕೋರ್ಟ್ ಆದೇಶ ನೀಡಿತ್ತು. ಪ್ರಕರಣದಲ್ಲಿ 7ನೇ ಆರೋಪಿಯನ್ನಾಗಿ ಹೆಸರಿಸಿರುವ ಖಾನ್ ಅವರನ್ನು ಚಂಚಲಗುಡ ಕಾರಾಗೃಹಕ್ಕೆ ಕಳುಹಿಸಲಾಗಿದೆ.ಖಾನ್ ಮಾರ್ಚ್ 2ಕ್ಕೆ ಬೆಂಗಳೂರು ಕೋರ್ಟ್‌ಗೆ ಶರಣಾಗಿದ್ದರು. ಆಗಿನಿಂದ ಕಾರಾಗೃಹದಲ್ಲಿದ್ದ ಅವರನ್ನು  ಇದೇ ಮೊದಲ ಬಾರಿ ವಿಚಾರಣೆಗೆಂದು ಇಲ್ಲಿಗೆ ಕರೆತರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry