`ನ್ಯಾಯಾಂಗ ವ್ಯವಸ್ಥೆಗೆ ಪೆಟ್ಟು ಬಿದ್ದರೆ ಸಮಾಜಕ್ಕೆ ಪೆಟ್ಟು'

7

`ನ್ಯಾಯಾಂಗ ವ್ಯವಸ್ಥೆಗೆ ಪೆಟ್ಟು ಬಿದ್ದರೆ ಸಮಾಜಕ್ಕೆ ಪೆಟ್ಟು'

Published:
Updated:

ಹುಕ್ಕೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಪೆಟ್ಟು ಬಿದ್ದರೆ ಸಮಾಜಕ್ಕೆ ಪೆಟ್ಟು  ನಿಶ್ಚಿತ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.ಭಾನುವಾರ, ಸ್ಥಳೀಯ ನ್ಯಾಯಾಲಯ ಮತ್ತು ವಕೀಲರ ಸಂಘದ ವಜ್ರ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ವಕೀಲಿ ವೃತ್ತಿಯ ಅನುಭವ ಹಂಚಿಕೊಂಡರು.ಹೈಕೋರ್ಟ್ ನ್ಯಾಯಮೂರ್ತಿಗಳಾದ ಸುಭಾಷ ಆಡಿ, ಎ. ಎಸ್. ಪಾಶ್ಚಾಪೂರೆ ಸಾಂದರ್ಭಿಕವಾಗಿ ಮಾತನಾಡಿದರು.

ಕೃಷಿ ಹಾಗೂ ಉಸ್ತುವಾರಿ ಸಚಿವ ಉಮೇಶ ಕತ್ತಿ, ಸಂಸದ ರಮೇಶ ಕತ್ತಿ,  ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಎ.ಆರ್. ಪಾಟೀಲ ಹಾಗೂ ಕೆ.ಬಿ. ನಾಯಿಕ ಮುಖ್ಯ ಅತಿಥಿಗಳಾಗಿದ್ದರು.ಸತ್ಕಾರ: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ನ್ಯಾಯಮೂರ್ತಿ ಕೆ. ಎಲ್. ಮಂಜುನಾಥ, ಸುಭಾಷ ಆಡಿ, ಎ. ಎಸ್. ಪಾಶ್ಚಾಪೂರೆ, ವಿ.ವಿ. ಮಲ್ಲಾಪುರ, ರೇಣುಕಾ ಕುಲಕರ್ಣಿ, ಸುನೀಲ ಹೊಸಮನಿ, ಯಶವಂತಕುಮಾರ, ಹಿಂದಿನ ನ್ಯಾಯಾಧೀಶರನ್ನು, ಇಲ್ಲಿಂದ ನ್ಯಾಯಾಧೀಶರಾಗಿ ಮತ್ತು ಸರ್ಕಾರಿ ಅಭಿಯೋಜಕರಾಗಿ ಆಯ್ಕೆಯಾದವರನ್ನು, 25 ವರ್ಷ ಸೇವೆ ಸಲ್ಲಿಸಿದ ವಕೀಲರನ್ನು, ಸಂಘದ ಪದಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಜಿಲ್ಲಾ ಮತ್ತು ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ವಕೀಲ ಸಂಘದ ಸದಸ್ಯರು, ಅಧ್ಯಕ್ಷ ಜಿ.ಎಸ್. ಗವತಿ, ಕಾರ್ಯಾಧ್ಯಕ್ಷ ಪಿ.ಆರ್. ಚೌಗಲಾ, ಸೇರಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಆರ್.ಬಿ. ಬೂದಿಹಾಳ ಸ್ವಾಗತಿಸಿದರು. ಹಿರಿಯ ವಕೀಲ ಪಿ.ಎಸ್. ಮುತಾಲಿಕ ವರದಿ ಓದಿದರು. ಆರ್.ವಿ. ಜೋಶಿ ಮತ್ತು ಕೆ.ಪಿ. ಶಿರಗಾಂವಕರ ನಿರೂಪಿಸಿದರು. ಕಾರ್ಯದರ್ಶಿ ಕೆ.ಬಿ. ಕುರಬೇಟ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry