ನ್ಯಾಯಾಧೀಶರಿಂದ ಜಯಾ ಆಸ್ತಿ ದೃಢೀಕರಣ

7

ನ್ಯಾಯಾಧೀಶರಿಂದ ಜಯಾ ಆಸ್ತಿ ದೃಢೀಕರಣ

Published:
Updated:

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಆಸ್ತಿಯ ದೃಢೀಕರಣಕ್ಕೆ ವಿಶೇಷ ನ್ಯಾಯಾ­­ಲಯದ ನ್ಯಾಯಾಧೀಶರು ಮತ್ತು ಅವರ ತಂಡ ಕರ್ನಾಟಕದಿಂದ ಚೆನ್ನೈಗೆ ಭೇಟಿ ನೀಡಿದೆ.ದೃಢೀಕರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ ಕೊಠಡಿಯಲ್ಲಿ ಇರಿಸ­ಲಾ­­ಗಿದ್ದ ಬೆಲೆಬಾಳುವ ವಸ್ತುಗಳನ್ನು ಚೆನ್ನೈ ಜಿಲ್ಲಾ­ಧಿಕಾರಿ ಕಚೇರಿ ಆವರಣ­ದಲ್ಲಿ­ನ ನ್ಯಾಯಾಲ­ಯಕ್ಕೆ ಒಯ್ಯಲಾ­ಗಿ­ತ್ತು­ ಎಂದು ಪೊಲೀಸರು ತಿಳಿಸಿದ್ದಾರೆ.ವಿಶೇಷ ನ್ಯಾಯಾಧೀಶ ಜಾನ್‌ ಮೈಕೆಲ್‌ ಡಿ’ಕುನ್ಹಾ ಮಂಗಳವಾರ ಚೆನ್ನೈನ ನ್ಯಾಯಾಲಯಕ್ಕೆ ಭೇಟಿ ನೀಡಿ  ದಾಖಲೆ­ಗಳು ಮತ್ತು ಅಮೂಲ್ಯ ವಸ್ತು­ಗಳ ದೃಢೀಕರಣ ನಡೆಸಿದರು.ಈ ವಸ್ತುಗಳನ್ನು ಕಣ್ಣಾರೆ ನೋಡಿ ಅಂದಾಜು ನಡೆಸಬೇಕು ಮತ್ತು ಅವು­ಗಳನ್ನು ಬೆಂಗಳೂರಿಗೆ ವರ್ಗಾಯಿ­ಸ­ಬೇಕು ಎಂದು ಡಿಎಂಕೆ ಪ್ರಧಾನ ಕಾರ್ಯ­ದರ್ಶಿ ಕೆ.ಅನ್ಬಳಗನ್‌ ಸಲ್ಲಿಸಿದ ದೂರಿನ ಮೇರೆಗೆ ಈ ಅಂದಾಜು ನಡೆಸಲಾಗಿದೆ.ಜಯಲಲಿತಾ ಅವರ ನಿವಾಸದಿಂದ 1997­ರಲ್ಲಿ ವಶಪಡಿಸಿಕೊಳ್ಳಲಾದ 800 ಕಿಲೋ ಬೆಳ್ಳಿ, 28 ಕಿಲೋ ಬಂಗಾರ, 750 ಜೊತೆ ಪಾದ­ರಕ್ಷೆಗಳು,10,500 ಸೀರೆಗಳು ಮತ್ತು 91 ವಾಚುಗಳನ್ನು ನ್ಯಾಯಾಲಯದ ಸುಪ­ರ್ದಿಗೆ ತೆಗೆದುಕೊಳ್ಳಬೇಕು ಎಂದು ಅನ್ಬಳಗನ್‌ ದೂರಿನಲ್ಲಿ ವಿನಂತಿಸಿದ್ದಾರೆ.ತಮಿಳುನಾಡಿನ ಜಾಗೃತ ನಿರ್ದೇಶ­ನಾಲಯ ಮತ್ತು ಭ್ರಷ್ಟಾಚಾರ ತಡೆ ಘಟಕ ಈ ಸೊತ್ತುಗಳನ್ನು ಜಯಲಲಿತಾ ನಿವಾಸದಿಂದ ವಶಪಡಿಸಿಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry