ಮಂಗಳವಾರ, ಅಕ್ಟೋಬರ್ 15, 2019
26 °C

ನ್ಯಾಯಾಲಯಕ್ಕೆ ಹಾಜರಾದ ಶ್ರೀರಾಮುಲು

Published:
Updated:

ಬಳ್ಳಾರಿ : 2008ರ ಚುನಾವಣೆ ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷೇತರ ಶಾಸಕ ಬಿ. ಶ್ರೀರಾಮುಲು ಸೋಮವಾರ ನ್ಯಾಯಾಲಯಕ್ಕೆ ಹಾಜರಾದರು.ನಗರದ ಕೋರ್ಟ್ ಆವರಣದಲ್ಲಿರುವ ಹಿರಿಯ ಸಿವಿಲ್ ನ್ಯಾಯಾಲಯದ ಕಿರಿಯ ಶ್ರೇಣಿ ನ್ಯಾಯಾಧೀಶರ ಎದುರು ಅವರು ಹಾಜರಾದರು. ಈ ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಧೀಶರು  ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗವಣೆ ಮಾಡಿ ಆದೇಶ ಹೊರಡಿಸಿದರು ಎಂದು ಶ್ರೀರಾಮುಲು ಪರ ವಕೀಲ ಸಿದ್ದಾರೆಡ್ಡಿ ಪತ್ರಿಕೆಗೆ ತಿಳಿಸಿದರು. ಬೇಸಿಗೆ ಹಂಗಾಮಿನ ಬೆಳೆ: ರೈತರಿಗೆ ಸಲಹೆ

ಬಳ್ಳಾರಿ ತಾಲ್ಲೂಕಿನಲ್ಲಿ ಕಾಲುವೆ ಮೂಲಕ ನೀರಾವರಿ ಸೌಲಭ್ಯ ಹೊಂದಿರುವ ಪ್ರದೇಶಗಳ ರೈತರು ಈ ಬಾರಿ ಬೇಸಿಗೆ ಹಂಗಾಮಿನಲ್ಲಿ ಭತ್ತದ ಬದಲಾಗಿ ಪರ್ಯಾಯ ಬೆಳೆಗಳಾದ ಹೈಬ್ರೀಡ್ ಜೋಳ, ಸಜ್ಜೆ, ಮೆಕ್ಕೆಜೋಳ, ಅಲಸಂದಿ, ಸೂರ್ಯಕಾಂತಿ ಬೆಳೆಗಳನ್ನು ಬೆಳೆಯಬೇಕೆಂದು ಸಹಾಯಕ ಕೃಷಿ ನಿರ್ದೇಶಕರು ಸಲಹೆ ನೀಡಿದ್ದಾರೆ. ನೀರಾವರಿ ಇಲಾಖೆಯು ಬೇಸಿಗೆ ಹಂಗಾಮಿನ ಬೆಳೆಗಾಗಿ ಈ ಬಾರಿ ಕಾಲುವೆಯಲ್ಲಿ ನೀರನ್ನು ಅಲ್ಪಾವಧಿಗಾಗಿ ಬಿಡಬಹುದಾದ್ದರಿಂದ ಹೆಚ್ಚಿನ ನೀರಾವರಿ ಅವಶ್ಯವಿರುವ ಭತ್ತದ ಬೆಳೆಯನ್ನು ಬೆಳೆಯುವುದು ಸೂಕ್ತವಲ್ಲ.  ಕೃಷಿ ವಿಶ್ವವಿದ್ಯಾಲಯದ ತಾಂತ್ರಿಕ ಮಾಹಿತಿ ಅನ್ವಯ ಪರ್ಯಾಯ ಬೆಳೆಗಳನ್ನು ಬೆಳೆಯಬಹುದೆಂದು ಸಲಹೆ ನೀಡಲಾಗಿದೆ. ಬೆಳೆಗಳಿಗೆ ನೀಡಿದ ರಸಾಯನಿಕ ರಸಗೊಬ್ಬರಗಳು ಬೆಳೆಗಳಿಗೆ ಉತ್ತಮವಾಗಿ ದೊರೆಯುವಂತಾಗಬೇಕಾದರೆ ಸಾವ ಯವ ಗೊಬ್ಬರವನ್ನು ಬಳಸಬೇಕೆಂದು  ತಿಳಿಸಿದ್ದಾರೆ.`ನೆನೆದವರ ಮನದಲ್ಲಿ~ ಬಿಡುಗಡೆ ನಾಳೆ


ಬಳ್ಳಾರಿ ತಾಲ್ಲೂಕಿನ ಅಲ್ಲಿಪುರ ಗ್ರಾಮದ ಶ್ರೀ ಮಹಾದೇವ ತಾತನವರ ಮಠದಲ್ಲಿ ಇದೇ 4ರಂದು ಬೆಳಿಗ್ಗೆ 10ಕ್ಕೆ ಸಿ.ಎಚ್.ಎಂ. ಬಸವರಾಜ ರಚಿಸಿರುವ ಮಹಾದೇವ ತಾತನವರ ಜೀವನ ಚರಿತ್ರೆ `ನೆನೆದವರ ಮನದಲ್ಲಿ~ ಪುಸ್ತಕವನ್ನು ಎಮ್ಮಿಗನೂರಿನ ವಾಮದೇವ ಮಹಾಂತ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡುವರು.ವಿಜಯ ಮಹಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡುವರು.  ಉಡೇದ ಬಸವರಾಜ ಅತಿಥಿಯಾಗಿ ಭಾಗವಹಿಸಲಿದ್ದು, ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಯವರ ಶಿಷ್ಯ  ಸುರೇಶ್ ಗವಾಯಿ ಅವರಿಂದ ಸಂಗೀತ ಸೇವೆ ನಡೆಯಲಿದ್ದು, ಎಸ್.ಎಸ್. ಹಿರೇಮಠ ತಬಲಾ ಸಾಥ್ ನೀಡುವರು ಎಂದು ಪ್ರಕಟಣೆ ತಿಳಿಸಿದೆ.ಶಿಷ್ಯವೇತನ: ಅರ್ಜಿ ಆಹ್ವಾನ

ನವದೆಹಲಿಯ ಕೇಂದ್ರೀಯ ಸೈನಿಕ ಮಂಡಳಿಯು ಪ್ರಥಮ ವರ್ಷದ ವೃತ್ತಿಪರ ಕೋರ್ಸ್‌ಗಳಿಗೆ ಪ್ರಧಾನಮಂತ್ರಿ ಶಿಷ್ಯವೇತನ ನೀಡಲು ಮಾಜಿ ಸೈನಿಕರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಧಾರವಾಡದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.ಜಿ.ಪಂ. ಸಾಮಾನ್ಯ ಸಭೆ 6ರಂದು

ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯು ಇದೇ 6ರಂದು ಬೆಳಿಗ್ಗೆ 11ಕ್ಕೆ ಸ್ಥಳೀಯ ಜಿ.ಪಂ. ಸಭಾಭವನದಲ್ಲಿ  ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ನಾಯಕ್ ತಿಳಿಸಿದ್ದಾರೆ.ರಾಜ್ಯ ಮಟ್ಟಕ್ಕೆ ಆಯ್ಕೆ 

ಗಜೇಂದ್ರಗಡ: ಸ್ಧಳೀಯ ಸರ್ಕಾರಿ ಉರ್ದು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಈಚೆಗೆ ಗದಗನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶಾಲೆಯ ಸುಮಯ್ಯಾ ಅತ್ತಾರ ಹಾಗೂ ಸಂಗಡಿಗರು  ಕವ್ವಾಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಧಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Post Comments (+)