ಭಾನುವಾರ, ನವೆಂಬರ್ 17, 2019
29 °C

ನ್ಯಾಯಾಲಯದ ಸಂವೇದನಾಶೀಲತೆ

Published:
Updated:

“ಅತ್ಯಾಚಾರಕ್ಕೆ ಒಳಗಾದ ಬಾಲಕಿ ಶಾಲೆಗೆ ಬಂದರೆ ಉಳಿದ ಮಕ್ಕಳ ಪೋಷಕರಿಗೆ ಮುಜುಗರವೇ? ಹಾಗಿದ್ದರೆ ಅವರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲಿ. ಸಣ್ಣ ವಯಸ್ಸಿನಲ್ಲಿ ಇಂಥ ನೋವುಂಡ ಮುಗ್ಧ ಬಾಲಕಿಯೊಬ್ಬಳಿಗೇ ಶಿಕ್ಷಣ ನೀಡಿ”....ಇವು ಹೈಕೋರ್ಟ್ ನ್ಯಾಯಮೂರ್ತಿ ರಾಮಮೋಹನರೆಡ್ಡಿಯವರ ಮುತ್ತಿನಂತಹ ನುಡಿಗಳು. ಬಾಲಕಿಗೆ ಶಾಲೆಯ ಪ್ರವೇಶ ನೀಡದಿದ್ದಲ್ಲಿ ಶಾಲೆಯ ಮಾನ್ಯತೆಯನ್ನೂ ರದ್ದುಪಡಿಸುವಂತೆ ಆದೇಶ ನೀಡಬೇಕಾಗುತ್ತದೆಂಬ ಎಚ್ಚರಿಕೆಯನ್ನೂ ಅವರು ನೀಡಿರುವುದು ಸ್ತುತ್ಯಾರ್ಹ.

 

`ನ್ಯಾಯದೇವತೆ~ಗೆ ವಂದನೆಗಳು. ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ `ಜೀವಾವಧಿ~ ಶಿಕ್ಷೆ ಜಾರಿಯಾಗಲಿ. ಮುಗ್ಧರ ಶೋಷಣೆ ತಪ್ಪಲಿ. 

ಪ್ರತಿಕ್ರಿಯಿಸಿ (+)