ನ್ಯಾ.ಸದಾಶಿವ ವರದಿ ಜಾರಿಗೆ ಆಗ್ರಹ

7

ನ್ಯಾ.ಸದಾಶಿವ ವರದಿ ಜಾರಿಗೆ ಆಗ್ರಹ

Published:
Updated:

ಇಂಡಿ: ಸಮಾಜದಲ್ಲಿ ನಿಜವಾಗಿ ತುಳಿತಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಬೇಕು ಎಂದು ನ್ಯಾಯಮೂರ್ತಿ ಎ.ಜೆ. ಸದಾಶಿವ ನೇತೃತ್ವದ ಆಯೋಗ ಮಾಡಿರುವ ಶಿಫಾರಸ್ಸನ್ನು ಯಥಾವತಾ್ತಗೆ ಜಾರಿಗೆ ತರಬೇಕೆಂದು ಆಗ್ರಹಿಸಿ, ಸೋಮವಾರ ಪಟ್ಟಣದಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಪ್ರಮುಖ ರಸೆ್ತಗಳಲ್ಲಿ ಪ್ರತಿಭಟನೆ ನಡೆಸಿದರು.ಮಧ್ಯಾಹ್ನ  ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಸವೇಶ್ವರ ವೃತ್ತ, ಡಾ, ಬಿ.ಆರ್‌. ಅಂಬೇಡ್ಕರ್‌ ವೃತ್ತದ ಮೂಲಕ  ಮೆರವಣಿಗೆ ಮಾಡಿದರು. ಕಳೆದ ಹಲವಾರು ವಷರ್ಗಳಿಂದ ನಮಗೆ ನೀಡಬೇಕಿದ್ದ ಒಳ ಮೀಸಲಾತಿ ನೀಡಿಲ್ಲ. ಇದಕಾ್ಕಗಿ ಸಾಕಷು್ಟ ಹೋರಾಟ ಮಾಡಲಾಗಿದೆ. ನಾ್ಯಯಮೂರ್ತಿ ಎ.ಜೆ.ಸದಾಶಿವ ಅವರು ಗಾ್ರಮ ಮಟ್ಟದಲಿ್ಲ ಸಂಚರಿಸಿ ಪರಿಸಿ್ಥತಿಯನು್ನ ಅರಿತು ವರದಿ ನೀಡಿದಾ್ದರೆ. ಅವರ ವರದಿ ಅನುಷಾ್ಠನಗೊಳಿಸಬೇಕು ಎಂದು ಆಗ್ರಹಿಸಿದರು.ಸದಾಶಿವ ಆಯೋಗದ ವರದಿ ಕೇಂದ್ರ ಸರಕಾರಕೆ್ಕ ಕಳುಹಿಸಬೇಕು, 10450 ಜನ ಗಾ್ರಮ ಸಹಾಯಕರನು್ನ ‘ಡಿ’ ಗ್ರೂಪ್‌ ನೌಕರರೆಂದು ಪರಿಗಣಿಸಬೇಕು, ಪೌರ ಕಾರ್ಮಿಕ ಗುತಿ್ತಗೆ ಪದ್ಧತಿಯನು್ನ ರದು್ದ ಮಾಡಬೇಕು, ಎಲಾ್ಲ ಇಲಾಖೆಗಳಲಿ್ಲರುವ ಕೆಲಸಗಾರರಿಗೆ ಖಾಯಂ ಮಾಡಬೇಕು ಎನು್ನವ ಬೇಡಿಕೆಗಳುಳ್ಳ ಮನವಿ ಪತ್ರವನ್ನು  ತಹಶೀಲ್ದಾರ್‌ ಜಿ.ಎಲ್‌.ಮೇತಿ್ರ ಅವರಿಗೆ ಸಲ್ಲಿಸಿದರು.ಈ ಪ್ರತಿಭಟನೆಯ ನೇತೃತ್ವವನು್ನ ಮಾದಿಗ ದಂಡೋರ ಮಾದಿಗ ಮೀಸಲಾತಿ ಸಮಿತಿ ಜಿಲಾ್ಲ ಸಂಘಟನಾ ಕಾರ್ಯದರ್ಶಿ ರೇವಣಸಿದ್ಧ ಮೇಲಿನಮನೆ. ಶಿವಶಂಕರ ಶಿವಣಗಿ, ಬೀರಪ್ಪ ಕಾಗರ, ಭೀರಪ್ಪ ಹೊರೆನವರ, ಸತೀಶ ಬೋಳೇಗಾಂವ, ಪ್ರಕಾಶ ಮನಗೂಳಿ, ಶಿವಾನಂದ ಕೆಂಗಿನಾಳ, ಶಿವಾನಂದ ನಂದರಗಿ, ಲತಾ ಕಾಗಾರ, ಬಾನುಬಾಯಿ, ಸತೀಶ ಕಟೀ್ಟಮನಿ, ರವೀಂದ್ರ ನಾರಾಯಣಪೂರ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry