ನ್ಯಾ. ಚಂದ್ರಶೇಖರಯ್ಯ ನೇಮಕ ಅನೂರ್ಜಿತ: ಸುಪ್ರೀಂ

7

ನ್ಯಾ. ಚಂದ್ರಶೇಖರಯ್ಯ ನೇಮಕ ಅನೂರ್ಜಿತ: ಸುಪ್ರೀಂ

Published:
Updated:
ನ್ಯಾ. ಚಂದ್ರಶೇಖರಯ್ಯ ನೇಮಕ ಅನೂರ್ಜಿತ: ಸುಪ್ರೀಂ

ನವದೆಹಲಿ (ಪಿಟಿಐ):  ಎರಡನೇ ಉಪ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರ ನೇಮಕವನ್ನು ಅನೂರ್ಜಿತ ಗೊಳಿಸಿದ್ದ ಹೈಕೋರ್ಟ್ ತೀರ್ಪು ಅನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ.ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಚಂದ್ರಶೇಖರಯ್ಯ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಕೆ.ಎಸ್ ರಾಧಾಕೃಷ್ಣ ಮತ್ತು ಮದನ್ ಬಿ ಲಾಕುರ್ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಸಮರ್ಥಿಸಿದರು.ಎರಡನೇ ಉಪ ಲೋಕಾಯುಕ್ತರನ್ನು ನೇಮಕ ಮಾಡುವಾಗ ಮುಖ್ಯಮಂತ್ರಿಯವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಚರ್ಚಿಸಿಲ್ಲ ಮತ್ತು ನೇಮಕಾತಿಯ ಸಂವಿಧಾನಬದ್ಧ ವಿದಿ ವಿಧಾನಗಳನ್ನು ಪೂರೈಸಿಲ್ಲ ಎಂದು ಸುಪ್ರೀಂ ಕೋರ್ಟ್ ಪೀಠ ತೀರ್ಪಿನಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry