ನ್ಯಾ. ಸದಾಶಿವ ಆಯೋಗದ ವರದಿ ಅಂಗೀಕಾರಕ್ಕೆ ಒತ್ತಾಯ

ಭಾನುವಾರ, ಮೇ 26, 2019
27 °C

ನ್ಯಾ. ಸದಾಶಿವ ಆಯೋಗದ ವರದಿ ಅಂಗೀಕಾರಕ್ಕೆ ಒತ್ತಾಯ

Published:
Updated:

ರಾಯಚೂರು: ನ್ಯಾಯಮೂರ್ತಿ ಎ.ಜೆ ಸದಾಶಿವ ಏಕಸದಸ್ಯ ಆಯೋಗದ ವರದಿಯನ್ನು ಕೂಡಲೇ ಅಧಿವೇಶನದಲ್ಲಿ ಅಂಗಿಕರಿಸಬೇಕು ಹಾಗೂ ಮೂರು ಜನ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಎ.ಜೆ ಸದಾಶಿವ ಆಯೋಗದ ವರದಿಯನ್ನು ಭೋವಿ, ಬಂಜಾರ ಹಾಗೂ ಹೊಲೆಯ ಸಂಘಟನೆಗಳು ಮತ್ತು ಸಚಿವರ ಬಹಿರಂಗ ಹೇಳಿಕೆಗಳು ನೀಡಿರುವುದು ಖಂಡನೀಯ ಎಂದು ತಿಳಿಸಿದರು.ನ್ಯಾಯಮೂರ್ತಿ ಎ.ಜೆ ಸದಾಶಿವ  ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ ಪತ್ರಿಕಾಗೋಷ್ಠಿ ನಡೆದ ತಕ್ಷಣವೇ ಮಾದಿಗ ಸಮುದಾಯ ಹೊರತುಪಡಿಸಿ, ಪರಿಶಿಷ್ಟ ಜಾತಿಯ ಹೊಲೆಯ, ಬಂಜಾರ ಹಾಗೂ ಭೋವಿ ಸಮುದಾಯಗಳು ಆಯೋಗದ ವರದಿ ಅವೈಜ್ಞಾನಿಕ ಹಾಗೂ ಅಸಂಬದ್ಧವಾಗಿದೆ. ಜನಸಂಖ್ಯೆ ಮರು ಸಮೀಕ್ಷೆ ಕಾರ್ಯ ನಡೆಸಲು ಮತ್ತು ವರದಿಯನ್ನು ರದ್ದುಪಡಿಸಲು ಸಮುದಾಯಗಳು ಸಮಾವೇಶಗಳು, ಹೇಳಿಕೆಗಳು ಮೂಲಕ ಆಗ್ರಹಿಸಲಾಗಿದೆ ಎಂದು ಆಪಾದಿಸಿದರು.ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಬಂಜಾರ ಪ್ರೊಫೆಸರ್ ಸಮಾವೇಶದಲ್ಲಿ  ಸಚಿವ ರೇವುನಾಯಕ ಬೆಳಮಗಿ ನೇತೃತ್ವವಹಿಸಿಕೊಂಡ ಈ ಸಮಾವೇಶವು ಆಯೋಗವು ಅವೈಜ್ಞಾನಿಕವಾಗಿದೆ. ಈ ಆಯೋಗದ ವರದಿ ರದ್ದುಪಡಿಸಲು ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಸಚಿವರು ಹೇಳಿವುದರ ಮೂಲಕ ವರದಿಯನ್ನು ವಿರೋಧಿಸಲಾಗಿದೆ ಎಂದು ಆರೋಪಿಸಿದರು.ದಾವಣಗೇರೆ ಜಿಲ್ಲೆಯಲ್ಲಿ ಭೋವಿ ಸಮಾಜ ಸಮಾವೇಶದಲ್ಲಿ ಸಚಿವರಾದ ಸುನಿಲ್ ವಲ್ಯಾಪುರೆ, ಅರವಿಂದ ಲಿಂಬಾವಳಿ ಆಯೋಗದ ವರದಿಯನ್ನು ಸರ್ಕಾರವು ಅಂಗೀಕರಸದಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಭರವಸೆಯನ್ನು ನೀಡಿದ್ದರು ಎಂದು ಆಪಾದಿಸಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ 8ರಿಂದ 10 ಶಾಸಕ ಸ್ಥಾನಗಳನ್ನು ಪಡೆಯುತ್ತಿದ್ದ ಮಾದಿಗ ಸಮುದಾಯವು ಬಿಜೆಪಿ ಪಕ್ಷದ ಜಾತಿ ರಾಜಕಾರಣದಿಂದ ಕಡಿಮೆ ಸಂಖ್ಯೆಯಲ್ಲಿರುವ ಭೋವಿ, ಲಂಬಾಣಿ ಸಮುದಾಯವನ್ನು ಗೆಲ್ಲಿಸುತ್ತಾ ನಿರ್ಣಾಯಕ ಓಟ್ ಬ್ಯಾಂಕ್ ಹೊಂದಿದ ಮಾದಿಗ ಸಮುದಾಯವನ್ನು ಉದ್ದೇಶ ಪೂರ್ವಕವಾಗಿ ಸೋಲಿಸಿದ್ದರಿಂದ 5ಜನ ಶಾಸಕ ಸ್ಥಾನಗಳಿಗೆ ಕುಸಿದಿದೆ ಎಂದು ವಿವರಿಸಿದರು.ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅಧಿವೇಶನದಲ್ಲಿ ಅಂಗೀಕರಿಸಬೇಕು, ಸಚಿವರಾದ ರೇವುನಾಯಕ ಬೆಳಮಗಿ, ಅರವಿಂದ ಲಿಂಬಾವಳಿ ಹಾಗೂ ಸುನಿಲ್ ವಲ್ಯಾಪುರೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಸಮಿತಿ ಗೌರವಾಧ್ಯಕ್ಷ ಎಸ್.ಮಾರೆಪ್ಪ ವಕೀಲ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.ಜಿಲ್ಲಾಧ್ಯಕ್ಷ ತಿಮ್ಮಪ್ಪ ಗುಂಜಹಳ್ಳಿ, ಆರ್.ರಾಮಸ್ವಾಮಿ, ಬಸವರಾಜ ಸಾಸಲಮರಿ, ತಾಯಪ್ಪ ಅರಕೇರಾ, ಗಣೇಶ ಪಾಳೆಂ, ಜೆ.ಎಂ.ತಾಯಪ್ಪ, ಕರುಣಾಕರ ಕಟ್ಟಿಮನಿ ವಕೀಲ, ನರಸಪ್ಪ ಮಾದಿಗ,  ಎನ್.ಮಹಾವೀರ, ಎಸ್.ರಾಜು, ಜೆ.ತಿಮ್ಮಪ್ಪ, ನರಸಪ್ಪ ಬಾಯಿದೊಡ್ಡಿ, ಎಚ್.ಕೆ ರವಿಕುಮಾರ, ಜಯಪ್ರಭು, ರಾಜರತ್ನಂ ಹಾಗೂ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry