ನ್ಯೂಜಿಲೆಂಡ್‌ಗೆ ಭರ್ಜರಿ ಜಯ

7
ಮೆಕ್ಲಮ್‌ ಸಹೋದರರ ಮಿಂಚಿನ ಆಟ

ನ್ಯೂಜಿಲೆಂಡ್‌ಗೆ ಭರ್ಜರಿ ಜಯ

Published:
Updated:

ಆಕ್ಲೆಂಡ್ (ಎಎಫ್‌ಪಿ): ಬ್ರೆಂಡನ್‌ ಮೆಕ್ಲಮ್‌ (ಅಜೇಯ 60) ಹಾಗೂ ನಥಾನ್ ಮೆಕ್ಲಮ್‌ (24ಕ್ಕೆ4)  ಅವರ ಸಾಂಘಿಕ ಆಟದಿಂದ ನ್ಯೂಜಿಲೆಂಡ್‌ ತಂಡ  ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟಿ–20 ಪಂದ್ಯದಲ್ಲಿ 81 ರನ್‌ಗಳ ಭರ್ಜರಿ ಜಯ ಸಂಪಾದಿಸಿದೆ.ಇಲ್ಲಿನ ಈಡನ್‌ ಪಾರ್ಕ್‌ ಅಂಗಳ ದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿ ಲೆಂಡ್‌ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 189 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ವಿಂಡೀಸ್ 8 ವಿಕೆಟ್‌ ಕಳೆದುಕೊಂಡು ಕೇವಲ 108 ರನ್‌ ಕಲೆಹಾಕಿ ಸೋಲೊಪ್ಪಿಕೊಂಡಿತು.ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 189 (ಬ್ರೆಂಡನ್‌ ಮೆಕ್ಲಮ್ ಅಜೇಯ 60, ಲೂಕ್ ರೋಂಚಿ ಅಜೇಯ 48; ಟಿನೊ ಬೆಸ್ಟ್‌ 40ಕ್ಕೆ 3, ನಿಖಿತಾ ಮಿಲ್ಲರ್ 26 ಕ್ಕೆ2) ವೆಸ್ಟ್‌ ಇಂಡೀಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 108 (ಆ್ಯಂಡ್ರೆ ಫ್ಲೆಚರ್ 23, ಜಾನ್ಸನ್ ಚಾರ್ಲಸ್ 16; ನಥಾನ್ ಮೆಕ್ಲಮ್‌ 24ಕ್ಕೆ4, ಜೇಮ್ಸ್‌ ನೀಶಾಮ್ 16ಕ್ಕೆ3)

ಫಲಿತಾಂಶ: ನ್ಯೂಜಿಲೆಂಡ್‌ಗೆ 81 ರನ್‌ಗಳ ಜಯ, ಎರಡು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry