ನ್ಯೂಜಿಲೆಂಡ್: ತುರ್ತು ಪರಿಸ್ಥಿತಿ ಘೋಷಣೆ

7

ನ್ಯೂಜಿಲೆಂಡ್: ತುರ್ತು ಪರಿಸ್ಥಿತಿ ಘೋಷಣೆ

Published:
Updated:

ಕ್ರೈಸ್ಟ್‌ಚರ್ಚ್ (ಪಿಟಿಐ/ಎಪಿ): ನ್ಯೂಜಿಲೆಂಡ್‌ನ ಎರಡನೇ ದೊಡ್ಡ ನಗರ ಕ್ರೈಸ್ಟ್‌ಚರ್ಚ್‌ನಲ್ಲಿ ಮಂಗಳವಾರ ಭೀಕರ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಜಾನ್ ಕೀ ಅವರು ಬುಧವಾರ ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.ಈ ಮಧ್ಯೆ, ದುರ್ಘಟನೆಯಲ್ಲಿ 75 ನಾಗರಿಕರು ಮೃತಪಟ್ಟಿರುವುದನ್ನು ಅವರು ದೃಢಪಡಿಸಿದ್ದಾರೆ.ಸುಮಾರು 55 ಶವಗಳ ಗುರುತು ಪತ್ತೆಯಾಗಿದೆ. ಇನ್ನೂ 20 ಶವಗಳ ಗುರುತು ಪತ್ತೆಯಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.ಸುಮಾರು 300 ಜನರು ಇನ್ನೂ ನಾಪತ್ತೆಯಾಗಿದ್ದು, ಅವರೆಲ್ಲಾ ಕುಸಿದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಸಾಧ್ಯತೆ ಇಲ್ಲ. ಬದುಕುಳಿದವರಿಗಾಗಿ ಶೋಧಕಾರ್ಯ ಮುಂದುವರಿದಿದೆ.‘ಶವಗಳೆಲ್ಲಾ ಇನ್ನೂ ನಗರದ ರಸ್ತೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಆದರೆ  ನಾವು ಈಗ ಬದುಕುಳಿದವರ ರಕ್ಷಣೆ ಮಾಡುವುದರತ್ತ ಗಮನ ಹರಿಸಿದ್ದೇವೆ’ ಎಂಬ ಪೊಲೀಸ್ ಸೂಪರಿಂಟೆಂಡೆಂಟ್ ರಸ್ಸೆಲ್ ಗಿಬ್ಸನ್ ಹೇಳಿದ್ದಾರೆ.ಅವಶೇಷಗಳ ಅಡಿಯಲ್ಲಿ 100ಕ್ಕೂ ಹೆಚ್ಚು ಜನರು ಸಿಕ್ಕಿ ಹಾಕಿಕೊಂಡಿರುವ ಸಾಧ್ಯತೆ ಇದೆ ಎಂದಿರುವ  ಅವರು,  ಮೃತಪಟ್ಟವರ ಸಂಖ್ಯೆ ಹೆಚ್ಚಾಗುವ ಸಂಭವವೂ ಇದೆ ಎಂದು ಹೇಳಿದ್ದಾರೆ.ಮಹಿಳೆಯ ರಕ್ಷಣೆ: ಭೂಕಂಪ ಸಂಭವಿಸಿ 24 ಗಂಟೆಗಳ ಬಳಿಕ ರಕ್ಷಣಾ ಕಾರ್ಯಕರ್ತರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry