ಶುಕ್ರವಾರ, ನವೆಂಬರ್ 22, 2019
27 °C

ನ್ಯೂಜಿಲೆಂಡ್ ಸೇಬು ಆಮದು ಹೆಚ್ಚಳ

Published:
Updated:

ಬೆಂಗಳೂರು: ನ್ಯೂಜಿಲೆಂಡ್ ಸೇಬಿಗೆ ಭಾರತದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇತ್ತೀಚಿನ ಅಂಕಿ-ಅಂಶ ಪ್ರಕಾರ 2012ರ ಡಿಸೆಂಬರ್ ವೇಳೆಗೆ ಸೇಬು ಆಮದು (ಹಿಂದಿನ ವರ್ಷಕ್ಕೆ ಹೋಲಿಸಿದರೆ) ಶೇ 90ರಷ್ಟು ಹೆಚ್ಚಿದೆ ಎಂದು `ಪಿಪ್‌ಫ್ರ್ಯೂಟ್ ನ್ಯೂಜಿಲೆಂಡ್' ಕಂಪೆನಿ ಮುಖ್ಯ ನಿರ್ವಹಣಾಧಿಕಾರಿ ಅಲನ್    ಪೊಲಾರ್ಡ್  ಹೇಳಿದರು.ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯೂಜಿಲೆಂಡ್ ಸೇಬು ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಭಾರತದಲ್ಲಿ ಲಭ್ಯ ಎಂದರು.ಸೇಬು ಬೆಳೆಯಲ್ಲಿ ಸುಧಾರಣೆ, ಗುಣಮಟ್ಟ ಕಾಯ್ದುಕೊಳ್ಳುವುದರ ಕುರಿತು ಭಾರತದ ಬೆಳೆಗಾರರೊಂದಿಗೆ ನ್ಯೂಜಿಲೆಂಡ್ ಕಾರ್ಯನಿರತವಾಗಿದೆ ಎಂದು ನವದೆಹಲಿಯಲ್ಲಿ ನ್ಯೂಜಿಲೆಂಡ್ ವಾಣಿಜ್ಯ ವಿಭಾಗದ ಕಮಿಷನರ್ ಆಗಿರುವ ರಿಚರ್ಡ್ ವೈಟ್ ಹೇಳಿದರು.`ಐಪಿಎಲ್'ನ ರಾಯಲ್ ಚಾಲೆಂಜರ್ಸ್ ತಂಡದ ಆಟಗಾರ, ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಡೇನಿಯಲ್ ವಿಟೋರಿ `ರಾಯಲ್ ಗಾಲಾ' ಸೇಬುಗಳನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದರು.2011ರಲ್ಲಿ ಮುಂಬೈನಲ್ಲಿ ಇದೇ ಬ್ರಾಂಡ್ ಸೇಬನ್ನು ಖ್ಯಾತ ಕ್ರಿಕೆಟಿಗ ಸರ್ ರಿಚರ್ಡ್ ಹ್ಯಾಡ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು.

ಪ್ರತಿಕ್ರಿಯಿಸಿ (+)