ಭಾನುವಾರ, ಫೆಬ್ರವರಿ 28, 2021
23 °C

ನ್ಯೂಯಾರ್ಕ್ ಪೋಸ್ಟ್‌ನಲ್ಲಿ ಟ್ರಂಪ್‌ ಪತ್ನಿ ಮೆಲಾನಿಯಾ ನಗ್ನ ಛಾಯಾಚಿತ್ರ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ ಪೋಸ್ಟ್‌ನಲ್ಲಿ ಟ್ರಂಪ್‌ ಪತ್ನಿ ಮೆಲಾನಿಯಾ ನಗ್ನ ಛಾಯಾಚಿತ್ರ ಪ್ರಕಟ

ನ್ಯೂಯಾರ್ಕ್ : ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರ ನಗ್ನ ಛಾಯಾಚಿತ್ರಗಳನ್ನು  ನ್ಯೂಯಾರ್ಕ್ ಪೋಸ್ಟ್ ಪತ್ರಿಕೆ ಪ್ರಕಟಿಸಿದೆ.ಮೆಲಾನಿಯಾ ಅವರು 1990ರ ದಶಕದಲ್ಲಿ ರೂಪದರ್ಶಿ ಆಗಿದ್ದಾಗಿನ ನಗ್ನ ಛಾಯಾಚಿತ್ರಗಳನ್ನು  ನ್ಯೂಯಾರ್ಕ್ ಪೋಸ್ಟ್‌ನಲ್ಲಿ ಜುಲೈ 31ರಂದು ಪ್ರಕಟಿಸಲಾಗಿದೆ.ಈ ಛಾಯಾಚಿತ್ರಗಳನ್ನು ಫ್ರೆಂಚ್ ಛಾಯಾಗ್ರಾಹಕ  ಅಲೆ ಡಿ ಬೇಸ್‌ವಿಲ್ಲೆ ಅವರು ತೆಗೆದಿದ್ದಾರೆ.ಈ ಕುರಿತು ಡೊನಾಲ್ಡ್ ಟ್ರಂಪ್ ಅವರನ್ನು ಕೇಳಿದಾಗ, ಮೆಲೆನಿಯಾ ಅವರು ಯಶಸ್ವಿ ರೂಪದರ್ಶಿ.

ಅವರ ಛಾಯಾಚಿತ್ರಗಳು ಪ್ರಮುಖ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.ಈ ಛಾಯಾಚಿತ್ರ ಯೂರೋಪ್‌ನ ನಿಯತಕಾಲಿಕೆಯೊಂದಕ್ಕೆ ತೆಗೆದದ್ದು. ಯೂರೋಪ್‌ನಲ್ಲಿ ಇದು ಸಾಮಾನ್ಯವಾಗಿದೆ’ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.