ನ. 2ರಿಂದ ರಾಜ್ಯ ವಾಲಿಬಾಲ್ ಟೂರ್ನಿ

7

ನ. 2ರಿಂದ ರಾಜ್ಯ ವಾಲಿಬಾಲ್ ಟೂರ್ನಿ

Published:
Updated:

ಜಮಖಂಡಿ: ಜಿಲ್ಲಾ ವಾಲಿಬಾಲ್ ಸಂಸ್ಥೆ ಹಮ್ಮಿಕೊಂಡಿರುವ ಬಾಲಕ-ಬಾಲಕಿಯರ ಸಬ್ ಜೂನಿಯರ್ ಹಾಗೂ ಜೂನಿಯರ್ ವಿಭಾಗಗಳ ರಾಜ್ಯಮಟ್ಟದ ವಾಲಿಬಾಲ್ ಟೂರ್ನಿ ನವೆಂಬರ್ 2 ಹಾಗೂ 3ರಂದು ನಗರದ ಪೋಲೋ ಮೈದಾನದಲ್ಲಿ ನಡೆಯಲಿದೆ.`ಲೀಗ್ ಹಾಗೂ ನಾಕೌಟ್ ವಿಧಾನದಲ್ಲಿ ನಡೆಯಲಿರುವ ಟೂರ್ನಿಯ ಬಾಲಕರ ಸಬ್‌ಜೂನಿಯರ್ ವಿಭಾಗದಲ್ಲಿ 18, ಜೂನಿಯರ್ ವಿಭಾಗದಲ್ಲಿ 16 ತಂಡ, ಬಾಲಕಿಯರ ಸಬ್ ಜೂನಿಯರ್ ವಿಭಾಗದಲ್ಲಿ 13 ಹಾಗೂ ಜೂನಿಯರ್ ವಿಭಾಗದಲ್ಲಿ 14 ತಂಡಗಳು ಪಾಲ್ಗೊಳ್ಳಲಿವೆ.ರಾಷ್ಟ್ರಮಟ್ಟದ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ತಂಡಗಳನ್ನು ಇಲ್ಲಿ ಆಯ್ಕೆ ಮಾಡಲಾಗುವುದು. ಅದಕ್ಕಾಗಿ ಆಯ್ಕೆ ಸಮಿತಿಯ 8 ಮಂದಿ ಅಧಿಕಾರಿಗಳು ಆಗಮಿಸಲಿದ್ದಾರೆ~ ಎಂದು  ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಜಿ.ದಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಒಟ್ಟು ಆರು ಕೋರ್ಟ್‌ಗಳನ್ನು ಟೂರ್ನಿಗಾಗಿ ಸಿದ್ಧಪಡಿಲಾಗಿದ್ದು ಇದರ ಪೈಕಿ 2 ಕೋರ್ಟ್‌ಗಳಲ್ಲಿ ಹೊನಲು ಬೆಳಕಿನ ಪಂದ್ಯಗಳು ನಡೆಯಲಿವೆ~ ಎಂದು ಅವರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry