ನ. 20 ರಿಂದ ಜಾತಿ ಜನಗಣತಿ

7

ನ. 20 ರಿಂದ ಜಾತಿ ಜನಗಣತಿ

Published:
Updated:

ಬೀದರ್: ಜಿಲ್ಲೆಯಲ್ಲಿ ನವೆಂಬರ್ 20 ರಿಂದ ಡಿಸೆಂಬರ್ 30ರ ಒಳಗೆ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಜನಗಣತಿ ಕಾರ್ಯ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿತೇಂದ್ರ ನಾಯಕ್ ತಿಳಿಸಿದರು.ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನೋಡಲ್ ಅಧಿಕಾರಿಗಳು, ಚಾರ್ಜ್ ಅಧಿಕಾರಿಗಳಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಈ ಜನಗಣತಿಯು 2010 ರಲ್ಲಿ ಮುಕ್ತಾಯಗೊಂಡ ಜನಗಣತಿಯ ಮುಂದುವರಿದ ಭಾಗವಾಗಿದೆ. ಜನರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಈ ಜನಗಣತಿಯಿಂದ ಸಾಧ್ಯವಾಗಲಿದೆ ಎಂದರು.ಈ ಬಾರಿ ಜನಗಣತಿ ಕಾರ್ಯಕ್ಕೆ ಶಿಕ್ಷಕರನ್ನು ಬಳಕೆ ಮಾಡುತ್ತಿಲ್ಲ. ಕಂದಾಯ ಇಲಾಖೆ ಸೇರಿದಂತೆ ಇತರ ಇಲಾಖೆಯ ಸಿಬ್ಬಂದಿಯನ್ನು ಕಡ್ಡಾಯವಾಗಿ ಗಣತಿ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿದೆ.ಗಣತಿದಾರರೊಂದಿಗೆ ಡಾಟಾ ಆಪರೇಟರ್ ಮನೆಗಳಿಗೆ ತೆರಳಲಿದ್ದು, ಈ ಟ್ಯಾಬ್ಲೆಟ್ ಪಿಸಿಗಳ ಮೂಲಕ ಹೆಚ್ಚುವರಿ ಮಾಹಿತಿಗಳನ್ನು ಸ್ಥಳದಲ್ಲೇ ಗಣಕೀಕರಿಸಲಾಗುವುದು. ಪ್ರತಿ ಗಣತಿದಾರರಿಗೆ 4 ಬ್ಲಾಕ್‌ಗಳನ್ನು ನಿಗದಿಪಡಿಸಲಾಗಿದೆ ಎಂದರು.ಸಂಪನ್ಮೂಲ ಅಧಿಕಾರಿ ವಿ. ದೊರೈಸ್ವಾಮಿ ಮಾತನಾಡಿ, ಗಣತಿದಾರರಿಗೆ ಒದಗಿಸಿರುವ ಮಾಹಿತಿ ಅಸಮರ್ಪಕ ಎಂದು ಕಂಡು ಬಂದರೆ ಅದನ್ನು ಷರಾದಲ್ಲಿ ನಮೂದಿಸಿ ಮೇಲಧಿಕಾರಿಗಳ ಗಮನಕ್ಕೆ ತರಲು ಈ ಬಾರಿಯ ಗಣತಿಯಲ್ಲಿ ಅವಕಾಶವಿದೆ ಎಂದು ಹೇಳಿದರು. ಜನಗಣತಿ ನೋಡಲ್ ಅಧಿಕಾರಿ ಶರ್ಮಾ ಜನಗಣತಿ ಕುರಿತು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry