ಶುಕ್ರವಾರ, ಮೇ 7, 2021
26 °C

ನ.1ರಿಂದ ಪರಿಷ್ಕೃತ ವೇತನ ಜಾರಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರವು ತನ್ನ ನೌಕರರ ವೇತನ ಪರಿಷ್ಕರಣೆಗಾಗಿ ನೇಮಿಸಿದ್ದ ಅಧಿಕಾರಿ ವೇತನ ಸಮಿತಿಯ ಬಹುತೇಕ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಿರುವುದು ಸ್ವಾಗತಾರ್ಹ.ಆದರೆ ದಿನಾಂಕ: 2011ರ ನವೆಂಬರ್ 1ರಿಂದ ಅನ್ವಯವಾಗುವಂತೆ ಮಧ್ಯಂತರ ಪರಿಹಾರ ಘೋಷಿಸಿ, ಅಧಿಕಾರಿ ವೇತನ ಸಮಿತಿ  ಶಿಫಾರಸುಗಳನ್ನು 2012ರ ಏಪ್ರಿಲ್ 1ರಿಂದ ಜಾರಿಗೊಳಿಸಲಾಗಿದೆ.ಇದರಿಂದ 2011ರ ನವೆಂಬರ್- 2012ರ ಮಾರ್ಚಿ ಅವಧಿಯಲ್ಲಿ ನಿವೃತ್ತರಾದವರಿಗೆ ವೇತನ ಪರಿಷ್ಕರಣೆ ಇಲ್ಲವಾಗಿದೆ. ಈ ಅವಧಿಯಲ್ಲಿ ಮಧ್ಯಂತರ  ಪರಿಹಾರ ಪಡೆದು ನಿವೃತ್ತರಾದ ನೌಕರರು ಹಳೆಯ ವೇತನ ಶ್ರೇಣಿಗಳನ್ನೇ ಪಡೆದು (2006ರ ವೇತನ ಆಯೋಗದ ವೇತನ ಶ್ರೇಣಿಗಳು) ನೊಂದ ಮನದಿಂದ ಮನೆಗೆ ಮರಳಬೇಕಾಗಿದೆ.

 

ಆದ್ದರಿಂದ ಸರ್ಕಾರ ಪರಿಶೀಲಿಸಿ, ತನ್ನ ನೌಕರರಿಗೆ ಮಧ್ಯಂತರ ಪರಿಹಾರ ಘೋಷಿಸಿದ ದಿನಾಂಕದಿಂದ(ನ.1) ಅನ್ವಯವಾಗುವಂತೆ ಪರಿಷ್ಕೃತ ವೇತನ ಶ್ರೇಣಿಗಳನ್ನು ಜಾರಿಗೊಳಿಸಿ ಸಹಜ ನ್ಯಾಯ ನೀಡಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.