ಭಾನುವಾರ, ಡಿಸೆಂಬರ್ 8, 2019
21 °C

ಪಂಕಜ್ ಚಾಂಪಿಯನ್

Published:
Updated:
ಪಂಕಜ್ ಚಾಂಪಿಯನ್

ಪುಣೆ (ಪಿಟಿಐ): ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ರಾಷ್ಟ್ರೀಯ ಬಿಲಿಯರ್ಡ್ಸ್ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಪಿವೈಸಿ ಹಿಂದು ಜಿಮ್ಖಾನಾ ಹಾಲ್‌ನಲ್ಲಿ ಶುಕ್ರವಾರ ನಡೆದ ಫೈನಲ್‌ನಲ್ಲಿ ಪಂಕಜ್ 5-0 ರಲ್ಲಿ ಕರ್ನಾಟಕದ ಬಿ. ಭಾಸ್ಕರ್ ವಿರುದ್ಧ ಜಯ ಪಡೆದರು.ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್‌ನ್ನು ಪ್ರತಿನಿಧಿಸಿದ ಬೆಂಗಳೂರಿನ ಪಂಕಜ್ 151-31, 152-26, 153-0, 150-0, 150-36 ರಲ್ಲಿ ಎದುರಾಳಿಯನ್ನು ಮಣಿಸಿದರು. `ಬೆಸ್ಟ್ ಆಫ್ ನೈನ್~ ಫ್ರೇಮ್‌ಗಳ ಫೈನಲ್‌ನಲ್ಲಿ ಪಂಕಜ್ ನೇರ ಫ್ರೇಮ್‌ಗಳಿಂದ ಗೆಲುವು ಪಡೆದರು.ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಂಕಜ್‌ಗೆ ದೊರೆತ ಆರನೇ ಪ್ರಶಸ್ತಿ ಇದು. ಮೂರು ಮತ್ತು ನಾಲ್ಕನೇ ಫ್ರೇಮ್‌ಗಳಲ್ಲಿ ಪಂಕಜ್ ಅವರ ಪ್ರಭಾವಿ ಆಟದ ಮುಂದೆ ಭಾಸ್ಕರ್‌ಗೆ ಪ್ರೇಕ್ಷಕನಾಗಿ ನಿಲ್ಲಬೇಕಾಯಿತು. ಸೆಮಿಫೈನಲ್‌ನಲ್ಲಿ ಪಂಕಜ್ 4-0 ರಲ್ಲಿ ಸೌರವ್ ಕೊಠಾರಿ ಅವರನ್ನು ಮಣಿಸಿದ್ದರೆ, ಭಾಸ್ಕರ್ 4-3 ರಲ್ಲಿ ಅಲೋಕ್ ಕುಮಾರ್ ವಿರುದ್ಧ ಜಯ ಪಡೆದಿದ್ದರು.

ಪ್ರತಿಕ್ರಿಯಿಸಿ (+)