ಗುರುವಾರ , ಮೇ 13, 2021
19 °C

ಪಂಗಡಗಳಿಂದ ಭಾವೈಕ್ಯಕ್ಕೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರುಗುಪ್ಪ: ಸಾಹಿತಿಗಳು ಸಮಾಜದಲ್ಲಿ ಸಮಾನತೆ ಮತ್ತು ಭಾವೈಕ್ಯ ಮೂಡಿಸುವಂತಹ ಲೇಖನಗಳನ್ನು ಹೊರಹೊಮ್ಮಿಸುವಂತೆ ಸೃಜನಾ ಫೌಂಡೇಶನ್‌ನ ಡಾ.ಮಧುಸೂಧನ ಕಾರಿಗನೂರು ಸಲಹೆ ನೀಡಿದರು.ತಾಲ್ಲೂಕಿನ ಕುಡುದರಹಾಳು ಗ್ರಾಮದಲ್ಲಿ ಈಚೆಗೆ ಡಾ.ಶಿವಕುಮಾರ ರಚಿತ ತಾಯಮ್ಮದೇವಿ ಹಾಡುಗಳ ಧ್ವನಿ ಸುರಳಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.  ಮನುಷ್ಯನ ರಕ್ತ ಒಂದೇ ಆದರೂ ನಾವು ನಮ್ಮಲ್ಲಿಯ ಮೌಢ್ಯತೆಯಿಂದ ಸಮಾಜದಲ್ಲಿ ಪಂಗಡ ರಚಿಸಿಕೊಂಡು ದೇಶದ ಭಾವೈಕ್ಯತೆಗೆ ಅಡ್ಡಿ ಉಂಟಾಗುತ್ತಿದೆ ಎಂದು ವಿಷಾದಿಸಿದರು.ಸಿಂಧನೂರಿನ ತಹಶೀಲ್ದಾರ್ ನರಸಿಂಹ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಳ್ಳಿಗಳಲ್ಲಿಯ ದೇಸ್ಥಾನಗಳು ಅಧ್ಯಾತ್ಮಿಕ ಕೇಂದ್ರಗಳಾಬೇಕೆ ಹೊರೆತು ದುಶ್ಚಟಗಳ ತಾಣವಾಗಬಾರದು ಎಂದರು.ಸಾಹಿತಿ ಡಾ.ಶಿವಕುಮಾರ್ ಸ್ವರಚಿತ ಹಾಡುಗಳ ಧ್ವನಿ ಸುರಳಿ ಕುರಿತು ಪ್ರಾಸ್ತಾವಿಕ ಮಾತನಾಡಿದರು. ರಂಗ ಕಲಾವಿದರಾದ ಕರಣಂ ಬಸವರಾಜ ಕೊಂಚಗೇರಿ, ಎಚ್. ಎರ‌್ರೆಪ್ಪಗೌಡ ಶಾನವಾಸಪುರ, ಡಿಎಸ್‌ಎಸ್ ಮುಖಂಡ ಇಬ್ರಾಂಪುರ ಗಂಗಪ್ಪ, ಪ್ರಗತಿಪರ ರೈತರಾದ ಟಿ.ಎಂ.ಸಿದ್ದಲಿಂಗಯ್ಯಸ್ವಾಮಿ, ಶಿವಮೊಗ್ಗ ವೆಂಕಟರಾಜು ಧ್ವನಿ ಸುರಳಿಯ ಸಾಹಿತ್ಯದ ಬಗ್ಗೆ ಮಾತನಾಡಿದರು.ಗ್ರಾಮದ ಮುಖಂಡರಾದ ಎ.ಕೆ.ನಾಗರಾಜ, ಟಿ.ಡಿ.ಈರನಗೌಡ, ಫಕ್ಕೀರಯ್ಯ, ಬಿ.ಭೀಮಣ್ಣ, ಡಾ.ರಾಮಲಿಂಗಪ್ಪ, ಚನ್ನಬಸಪ್ಪ ಹೂಗಾರ್, ತಿಮ್ಮಪ್ಪ ಅರಳಿಗನೂರು, ಗೋಪಾಲರೆಡ್ಡಿ, ಶಾಂತಕುಮಾರ, ಭೀಮಣ್ಣ ಉಪಸ್ಥಿತರಿದ್ದರು. ಬಿ.ಸತ್ಯನಾರಾಯಣ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.