ಪಂಚಕಲ್ಯಾಣ ಮಹೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮ

7

ಪಂಚಕಲ್ಯಾಣ ಮಹೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮ

Published:
Updated:

ದಾವಣಗೆರೆ: ಜಿಲ್ಲೆಯ ಹರಪನಹಳ್ಳಿಯ ಆದಿನಾಥ ತೀರ್ಥಂಕರ ತ್ರಿಕೂಟ ಚೂಡಾಮಣಿ ದಿಗಂಬರ ಜೈನ ಮಂದಿರದಲ್ಲಿ `ಪಂಚಕಲ್ಯಾಣ ಪೂಜಾ ಮಹೋತ್ಸವ~ ಅಂಗವಾಗಿ ಫೆ. 23ರಿಂದ 27ರವರೆಗೆ ವಿವಿಧ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.26ರಂದು `ಕೇವಲ ಜ್ಞಾನ ಕಲ್ಯಾಣ ಮಹೋತ್ಸವ~ವಿದೆ. ಬೆಳಿಗ್ಗೆ 8ಕ್ಕೆ ವಟುಗಳಿಗೆ ವ್ರತೋಪದೇಶ ನಡೆಯ ಲಿದೆ. 27ರಂದು ಬೆಳಿಗ್ಗೆ 6.30ಕ್ಕೆ ನಿತ್ಯನಿಧಿ ಸಹಿತ ಅಭಿಷೇಕ, ಬೆಳಿಗ್ಗೆ 8ಕ್ಕೆ ಭಕ್ತಾಮರ ವಿಧಾನ, ಬೆಳಿಗ್ಗೆ 10.30ರಿಂದ 1008 ಕಳಸಗಳಿಂದ ಮಹಾಭಿಷೇಕ ಪೂಜೆ, ಮಹಾಶಾಂತಿ ಮಂತ್ರ, ಶ್ರುತ ಪೂಜಾ, ಶ್ರೀಕ್ಷೇತ್ರಪಾಲ ಮತ್ತು ಯಕ್ಷ- ಯಕ್ಷಿಣಿಯರ ಷೋಡಶೋಪಚಾರ ಪೂಜೆ, ಗುರುಗಳ ಪಾದಪೂಜೆ, ಆಶೀರ್ವಚನ, ಧ್ವಜಾರೋಹಣ, ಕಂಕಣ ವಿಸರ್ಜನೆ, ಸಾಂಸ್ಕೃತಿಕ ಕಾರ್ಯ ನಡೆಯಲಿವೆ.ನೂತನ ವಟುಗಳಿಗೆ ಉಚಿತವಾಗಿ ವ್ರತೋಪದೇಶ ಮಾಡಲಾಗುವುದು. ಆಸಕ್ತರು ಮುಂಚಿತವಾಗಿ ಹೆಸರು ನೋಂದಾಯಿಸಬೇಕು (ಮೊಬೈಲ್: 93416 80567) ಎಂದು ಜೆ.ಎಸ್. ಚಂದ್ರನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.23ರಂದು ಬೆಳಿಗ್ಗೆ 11ಕ್ಕೆ `ಗರ್ಭಾವತರಣ ಕಲ್ಯಾಣ ಮಹೋತ್ಸವ~ ಕಾರ್ಯಕ್ರಮವಿದೆ. ನಂತರ ಆದಿನಾಥ ತೀರ್ಥಂಕರರ ಪಂಚಕಲ್ಯಾಣ ಪೂಜಾ ಮಹೋತ್ಸವವನ್ನು ಹರಪನಹಳ್ಳಿ ತೆಗ್ಗಿನಮಠದ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು. ಹುಬ್ಬಳ್ಳಿಯ ವಾಸುದೇವ ಚೂಡಪ್ಪ ಇಜಾರಿ ಅಧ್ಯಕ್ಷತೆ ವಹಿಸುವರು. ಹರಪನಹಳ್ಳಿ ಪುರಸಭೆ ಅಧ್ಯಕ್ಷ ಮೆಹಬೂಬಸಾಬ, ಶಾಂತೇಶ್ವರ ದಿಗಂಬರ ಜೈನ ಸಮಾಜದ ಉಪಾಧ್ಯಕ್ಷ ಎಂ.ಜೆ. ಜಿನದತ್ತರಾಯ, ಬೆಂಗಳೂರಿನ ಎಂ. ಅಶೋಕ, ಹಡಗಲಿ ದಿಗಂಬರ ಜೈನ ಸಮಾಜದ ಅಧ್ಯಕ್ಷ ಶೇಷನಗೌಡ್ರು, ಶ್ವೇತಾಂಬರ ಜೈನ ಸಮಾಜದ ಅಧ್ಯಕ್ಷ ಧನರಾಜ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಪೆಂಡಕೂರು ನಾರಾಯಣಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಹಡಗಲಿಯ ಜಿಬಿಆರ್ ಕಾಲೇಜಿನ ದಯಾನಂದ ಗೌಡ, ಹುಬ್ಬಳ್ಳಿಯ ಶಾಂತಿನಾಥ ಹೊತಪೇಟೆ ಭಾಷಣ ಮಾಡುವರು.ಅಂದು ಸಂಜೆ 5ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಹರಪನಹಳ್ಳಿಯ ವರ್ಧಮಾನ ವಸುಪಾಲಪ್ಪ ಇಜಾರಿ ಅಧ್ಯಕ್ಷತೆ ವಹಿಸುವರು. ತಹಶೀಲ್ದಾರ್ ಡಾ.ವೆಂಕಟೇಶಮೂರ್ತಿ, ಸರ್ಕಲ್ ಇನ್‌ಸ್ಪೆಕ್ಟರ್ ಬಸವರಾಜ ಮತ್ತು ಎಚ್.ಎ. ತೀರ್ಥರಾಜ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಉಮಾಪತಿ, ಬೆಸ್ಕಾಂ ಎಇಇ ಜಯಪ್ಪ, ಪುರಸಭೆ ಮುಖ್ಯ ಆಡಳಿತಾಧಿಕಾರಿ ಜಟ್ಟೆಪ್ಪ ಪಾಲ್ಗೊಳ್ಳುವರು.24ರಂದು ಸಂಜೆ 6ಕ್ಕೆ `ಜನ್ಮಕಲ್ಯಾಣ ಮಹೋತ್ಸವ~ ನಡೆಯಲಿದೆ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ, ಮೂಡಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ನಿವೃತ್ತ ನ್ಯಾಯಾಧೀಶ ರಾಯಪ್ಪ ಚೂಡಪ್ಪ ಇಜಾರಿ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಪಿ. ರವೀಂದ್ರ, ಮಾಜಿ ಶಾಸಕ ಪರಮೇಶ್ವರ ನಾಯ್ಕ, ಡಿವೈಎಸ್ಪಿ ಎಚ್.ಆರ್. ರಾಧಾಮಣಿ, ಕಾಂಗ್ರೆಸ್ ಮುಖಂಡ ಚಂದ್ರಶೇಖರ ಭಟ್, ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಎಚ್.ಕೆ. ಹಾಲೇಶ, ಪುರಸಭೆ ಸದಸ್ಯ ಪಾಟೀಲ ಬೆಟ್ಟನಗೌಡ, ವರ್ತಕ ಬಿ. ಫೆವರಚಂದ ಜೈನ, ತೆಗ್ಗಿನಮಠದ ವ್ಯವಸ್ಥಾಪಕ ಚಂದ್ರಶೇಖರ, ಕೆ. ಕಲ್ಲಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ. ಸಂತೋಷ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

 

ಹೊಸಪೇಟೆ ವಿಜಯನಗರ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಶಿವಾನಂದ, ಹೊಸದುರ್ಗದ ಸುಮತಿಕುಮಾರ ಭಾಷಣ ಮಾಡುವರು.25ರಂದು ಸಂಜೆ 6ಕ್ಕೆ ಧಾರ್ಮಿಕ ಸಭೆ, `ದೀಕ್ಷಾ ಕಲ್ಯಾಣ~ ಕಾರ್ಯಕ್ರಮ ನಡೆಯಲಿದೆ. ಮಾಜಿ ಶಾಸಕ ಇಲ್ಕಲ್ ವಿಜಯಕುಮಾರ್ ಅಧ್ಯಕ್ಷತೆ ವಹಿಸುವರು. ಶಾಸಕ ಕರುಣಾಕರ ರೆಡ್ಡಿ, ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ಮಾಜಿ ಸಂಸತ್ ಸದಸ್ಯ ಕೋಳೂರ ಬಸವನಗೌಡ್ರ, ಜಿ.ಪಂ. ಮಾಜಿ ಸದಸ್ಯ ಮಹಾಬಲೇಶ್ವರ ಗೌಡ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಆರುಂಡಿ ನಾಗರಾಜ, ಬಿಜೆಪಿ ಮುಖಂಡ ಬಿ. ನಂಜನಗೌಡ, ಪುರಸಭೆ ಉಪಾಧ್ಯಕ್ಷೆ ಸುಮಿತ್ರಾ ಬಪ್ಪೂಜಿ, ಪಿಎಸ್‌ಐ ವಸಂತ ವಿ. ಅಸೂದೆ  ಪಾಲ್ಗೊಳ್ಳುವರು. ಹಡಗಲಿಯ ವರಕುಮಾರ ಗೌಡ್ರು, ಕಾರ್ಕಳದ ಉಪನ್ಯಾಸಕ ಮುನಿರಾಜ ರಂಜಾಳ ಭಾಷಣ ಮಾಡುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry