ಪಂಚತಾರಾ ಜೈಲು ಯಾತ್ರೆ: ಕಾಂಗ್ರೆಸ್ ವ್ಯಂಗ್ಯ

7

ಪಂಚತಾರಾ ಜೈಲು ಯಾತ್ರೆ: ಕಾಂಗ್ರೆಸ್ ವ್ಯಂಗ್ಯ

Published:
Updated:

ನವದೆಹಲಿ (ಪಿಟಿಐ): ಭ್ರಷ್ಟಾಚಾರ ಆರೋಪದ ಮೇಲೆ ಜೈಲು ಸೇರಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಸ್ಪತ್ರೆಯಿಂದ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದನ್ನು ಕಾಂಗ್ರೆಸ್ ಪಕ್ಷ ಖಂಡಿಸಿದೆ.`ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರ ಪಂಚತಾರಾ ರಥಯಾತ್ರೆಯಂತೆ ಯಡಿಯೂರಪ್ಪ ಅವರದು ಪಂಚತಾರಾ ಜೈಲು ಯಾತ್ರೆ~ ಎಂದು ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ ವ್ಯಂಗ್ಯವಾಡಿದ್ದಾರೆ.ಜೈಲಿನಿಂದ ಹೊರಗುಳಿಯುವ ಯಡಿಯೂರಪ್ಪ ಅವರ ಎಲ್ಲ ಪ್ರಯತ್ನಗಳನ್ನೂ ಬಿಜೆಪಿ ಪ್ರೋತ್ಸಾಹಿಸಿದೆ ಎಂದು ಅವರು ಬುಧವಾರ ಸುದ್ದಿಗಾರರ ಬಳಿ ದೂರಿದರು.`ಈ ದೇಶದ ಜನರನ್ನು ಮೂರ್ಖರನ್ನಾಗಿ ಮಾಡುವ ಈ ಪ್ರಯತ್ನ  ಖಂಡನೀಯ~ ಎಂದು ಟೀಕಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry