ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿ

7

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿ

Published:
Updated:

ಶಿರಹಟ್ಟಿ: ರಾಜ್ಯದಲ್ಲಿ ಬಹುಸಂಖ್ಯಾತ ಪಂಚಮಸಾಲಿಗಳು ಇದ್ದರೂ ಸರ್ಕಾರ ದಿಂದ ಯಾವುದೇ ಸೌಲಭ್ಯಗಳಿಲ್ಲ. ನೆರೆಯ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲಿ ಮೀಸಲಾತಿ ಕಲ್ಪಿಸಿದರೂ ಕರ್ನಾಟಕದಲ್ಲಿ ಮಾತ್ರ  ಎಲ್ಲ ಸೌಲಭ್ಯ ಗಳಿಂದ ವಂಚಿತಗೊಂಡಿದೆ ಎಂದು ಪಂಚಮಸಾಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ದಿಂಡೂರ ಆರೋಪಿಸಿದರು.ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘದ ನಗರ ಘಟಕದ ಅಡಿಯಲ್ಲಿ ಶನಿವಾರ ಪಟ್ಟಣದ ಜ. ಫಕೀರೇಶ್ವರ ಸಮುದಾಯ ಭವನದಲ್ಲಿ ಪ್ರತಿಭಾ ಪುರಸ್ಕಾರ, ನಗರ ಘಟಕ, ಯುವ ಘಟಕ ಹಾಗೂ ಮಹಿಳಾ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಸಮಾಜದ ಶೋಷಣೆ ಹೀಗೆ ನಿರಂತರ ಮುಂದುವರೆಯುತ್ತ ಬಂದರೆ ಎಲ್ಲ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬುದನ್ನು ಮರೆಯ ಬಾರದು ಎಂದರು.ಹರಿಹರ ಪಂಚಮಸಾಲಿ ಪೀಠದ ಸಿದ್ಧಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಪಂಚಮಸಾಲಿ ಸಮಾಜವನ್ನು ಒಂದು ಶಕ್ತಿಯನ್ನಾಗಿ ಪರಿಗಣಿಸುವಂತೆ ಮಾಡಬೇಕಾಗಿದೆ. ಧಾರ್ಮಿಕ ತಳಹದಿಯಲ್ಲಿ ಬೆಳೆದಂತಹ ಪಂಚಮಸಾಲಿ ಸಮಾಜದ ಜನರು ಸರ್ವಧರ್ಮ ಸಹಿಷ್ಣುಗಳಾಗಿದ್ದರೂ ಸಹ ಅವರಿಂದ ಸಮಾಜಕ್ಕೆ ಕೊಡುಗೆ ಅಪಾರವಾದದು ಎಂದರು.ನಗರ ಘಟಕವನ್ನು ಗೌರವಾಧ್ಯಕ್ಷ ಭಾವಿ ಬೆಟ್ಟಪ್ಪ ಹಾಗೂ ಯುವ ಘಟಕ ವನ್ನು ಶಿದ್ದಣ್ಣ ಹಲಸಿ ಉದ್ಘಾಟಿಸಿದರು. ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಬೆನ್ನೂರ ಉದ್ಘಾಟಿಸಿ ದರು.

ಶಾಸಕ ರಾಮಣ್ಣ ಲಮಾಣಿ ಪಂಚಮಸಾಲಿ ಸಮುದಾಯ ಭವನಕ್ಕೆ ಅನುದಾನ ನೀಡುವದಾಗಿ ಭರವಸೆ ನೀಡಿದರು.ವೀರಶೈವ ಪಂಚಮಸಾಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷ ಗೌಡ ದೇಸಾಯಿಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ದಿಂಡೂರ ಭಾವಚಿತ್ರ ಅನಾವರಣ ಮಾಡಿದ್ದರು. ಸಿದ್ರಾಮಪ್ಪ ಅಕ್ಕಿ, ವಿರೂಪಾಕ್ಷ ಮತ್ತೂರ, ಫಕೀರೇಶ ಮಾಬಳಿ, ಬಸವಣ್ಣೆಪ್ಪ ಕಲ್ಯಾಣಿ, ಮಲ್ಲಪ್ಪ ವರವಿ ಹಾಗೂ ನಿವೃತ್ತ ಶಿಕ್ಷಕ ರಾಮಣ್ಣ ಕಮತ ಅವರನ್ನು ಸನ್ಮಾನಿಸಲಾಯಿತು.ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಆರ್. ತೋಟದ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಅಶೋಕ ಪಲ್ಲೇದ, ತಿಪ್ಪಣ್ಣ ಕೊಂಚಿಗೇರಿ, ತಾಪಂ ಅಧ್ಯಕ್ಷ, ಶಿವನಗೌಡ ಕಂಟಿಗೌಡರ, ತಾಲ್ಲೂಕು ಅಧ್ಯಕ್ಷ ಡಾ. ಎಸ್.ಬಿ. ಜವಾಯಿ, ಸದಾನಂದಗೌಡ ಕರಿಗೌಡ್ರ, ರೇಖಾ ಮಾಬಳಿ, ಪ್ರಕಾಶ ಮಾಬಳಿ, ಫಕೀರೇಶ ಅಕ್ಕಿ, ಚನ್ನವೀರಪ್ಪ ಕಲ್ಯಾಣಿ, ಸೋಮಣ್ಣ ಡಾನಗಲ್ಲ, ಸೋಮಣ್ಣ ಮುಳಗುಂದ, ಶಿವನಗೌಡ ಪಾಟೀಲ, ಬಸವರಾಜ ಹೊಸೂರ, ನಾಗರಾಜ ಅಕ್ಕೂರ, ಯಲ್ಲಪ್ಪ ಇಂಗಳಗಿ, ಚಂದ್ರ ಶೇಖರಪ್ಪ ಕುಲಕರ್ಣಿ, ಜಿ.ಪಂ. ಸದಸ್ಯ ಫಕೀರೇಶ ಕಾಳಪ್ಪನವರ, ಬಳಿಗಾರ ಇತರರು ಉಪಸ್ಥಿತರಿದ್ದರು.  ಫಕೀರೇಶ ಅಕ್ಕಿ ಸ್ವಾಗತಿಸಿದರು. ಬಸವರಾಜ ಕಲ್ಯಾಣಿ ನಿರೂಪಿಸಿ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry