ಪಂಚಮಿಗೆ ಕಲಾಕುಟೀರದ ಹುತ್ತ

7

ಪಂಚಮಿಗೆ ಕಲಾಕುಟೀರದ ಹುತ್ತ

Published:
Updated:
ಪಂಚಮಿಗೆ ಕಲಾಕುಟೀರದ ಹುತ್ತ

ತ್ಯಾಜ್ಯ ವಸ್ತುಗಳ ನಿರ್ವಹಣೆ ಇಂದು ನಗರದ ಬಹುದೊಡ್ಡ ಸಮಸ್ಯೆ. ಅದನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬ ಪ್ರಶ್ನೆ ಎದುರಾಗುತ್ತಿದೆ. ಇದಕ್ಕೆ ಉತ್ತರವೆಂಬಂತೆ ಜೀವನಹಳ್ಳಿ ಮುಖ್ಯರಸ್ತೆಯ ದೇವಕಿ ಕಲಾಕುಟೀರದ ದೇವಕಿಸುತ ಅವರು ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಗೃಹೋಪಯೋಗಿ ಕರಕುಶಲ ವಸ್ತುಗಳನ್ನು ತಯಾರಿಸಿ, ಇತರರಿಗೂ ಈ ಬಗ್ಗೆ ತರಬೇತಿ ನೀಡುತ್ತಿದ್ದಾರೆ.ಮನೆಗಳಲ್ಲಿ ಸಾಮಾನ್ಯವಾಗಿ ಬಳಸಿ ಎಸೆಯುವ ತೆಂಗಿನ ಚಿಪ್ಪು, ಬಳಸಿದ ಟೀಪುಡಿ, ಟೂತ್‌ಪೇಸ್ಟ್‌ನ ಖಾಲಿ ಟ್ಯೂಬ್‌ಗಳಿಂದ ಬಗೆಬಗೆಯ ಆಕರ್ಷಕ ಕರಕುಶಲ ವಸ್ತುಗಳು ಜೀವ ತಳೆಯುತ್ತವೆ. ಈ ಬಾರಿ ನಾಗರ ಪಂಚಮಿಗಾಗಿ ಏನಾದರೂ ಹೊಸದನ್ನು ಪರಿಚಯಿಸುವ ಉದ್ದೇಶದೊಂದಿಗೆ ಬಳಸಿದ ಟೀಪುಡಿ, ಹಳೆ ಕಾಗದ, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಹಳೆ ಪಲ್ಪ್‌ನಿಂದ `ಹುತ್ತ~ದ ಹುಂಡಿ ತಯಾರಿಸಿದ್ದಾರೆ.ಇದನ್ನುಪೂಜೆಗೆ ಮಾತ್ರವಲ್ಲದೆ ಮಕ್ಕಳು ಹಣ ಕೂಡಿಡಲು ಅನುಕೂಲವಾಗುವ ಹುಂಡಿಯಂತೆಯೂ ಬಳಸಬಹುದು. ಮೇಲ್ಭಾಗ ಹುತ್ತದ ಆಕೃತಿಯಲ್ಲಿದ್ದು, ಕೆಳ ಭಾಗದಲ್ಲಿ ಹಣ ಸಂಗ್ರಹಕ್ಕಾಗಿ ಮರದ ಡಬ್ಬಿ ಇಡಲಾಗಿದೆ. ಅವರು ಹೇಳುವಂತೆ ದೀರ್ಘ ಬಾಳಿಕೆ ಬರುತ್ತದೆ ಮತ್ತು ಗಟ್ಟಿ ಮುಟ್ಟಾಗಿರುತ್ತದೆ.ವೃತ್ತಿಯಲ್ಲಿ ದರ್ಜಿಯಾಗಿರುವ ದೇವಕಿಸುತ ಅವರು ಎಲ್ಲಿಯೂ ತರಬೇತಿ ಪಡೆದು ಕಲಿತ ವಿದ್ಯೆಗಳಲ್ಲ. ಸ್ವತಃ ತಾವೇ ಆಸಕ್ತಿ ವಹಿಸಿ ಕಲಿತು ತಯಾರಿಸಿದ ಕರಕುಶಲ ಕಲೆಗಳಿವು. ಇದನ್ನು ಇತರರಿಗೂ ಕಲಿಸುವ ಉದ್ದೇಶದಿಂದ ತಿಂಗಳಿಗೆ ಎರಡು ಸಲದಂತೆ 6 ತಿಂಗಳು ತರಬೇತಿ ನೀಡುತ್ತಾರೆ. ಆಗಸ್ಟ್‌ನಿಂದ  ತರಗತಿಗಳು ಆರಂಭವಾಗಲಿದೆ. ಅಂಗವಿಕಲರು, ವಿದ್ಯಾರ್ಥಿಗಳು ಸೇರಿದಂತೆ ಆಸಕ್ತರಿಗೆ ತರಬೇತಿ ನೀಡುತ್ತೇನೆ ಎನ್ನುತ್ತಾರೆ ಅವರು.ಟೂತ್‌ಪೇಸ್ಟ್‌ನ ಖಾಲಿ ಟ್ಯೂಬ್‌ನಿಂದ ಎಲೆ, ಟೀಪುಡಿ, ಫೆವಿಕಾಲ್ ಮಿಶ್ರಣ ಮಾಡಿ ಅಲಂಕಾರಿಕ ಮಾವಿನ ಕಾಯಿ, ಸೌತೆಕಾಯಿ, ಎಳನೀರು, ತೆಂಗಿನ ಚಿಪ್ಪಿನಲ್ಲಿ ಮುಖವಾಡ ಹೀಗೆ ನಾನಾ ನಮೂನೆಯ ಕಲಾಕೃತಿಗಳ ತಯಾರಿಕೆ ಕುರಿತು ತರಬೇತಿ ನೀಡಲಾಗುತ್ತದೆ. ಅವರ ಸಂಪರ್ಕ ಸಂಖ್ಯೆ: 98861 91206, 97391 85523.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry