ಶನಿವಾರ, ನವೆಂಬರ್ 23, 2019
17 °C

ಪಂಚಮಿ ಉತ್ಸವ: ಅಕ್ಷತಾಭಿಯಾನಕ್ಕೆ ಚಾಲನೆ

Published:
Updated:

ಸಿದ್ದಾಪುರ: `ತಾಲ್ಲೂಕಿನ ಭಾನ್ಕುಳಿ ಮಠದಲ್ಲಿ  ಮೇ 14 ರಿಂದ 19 ರವರೆಗೆ ನಡೆಯಲಿರುವ  ಶಂಕರ ಪಂಚಮಿ ಉತ್ಸವದಲ್ಲಿ ರಾಮಚಂದ್ರಾಪುರ ಮಠದ ಶಿಷ್ಯರು ತ್ರಿಕರಣಪೂರ್ವಕವಾಗಿ ಪಾಲ್ಗೊಳ್ಳಬೇಕು' ಎಂದು ರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಳದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಹೇಳಿದರು.

ತಾಲ್ಲೂಕಿನ ಭಾನ್ಕುಳಿ ಮಠದಲ್ಲಿ ಭಾನುವಾರ ಶಂಕರ ಪಂಚಮಿಯ  ಅಕ್ಷತಾಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

`ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಸಂಕಲ್ಪ ಮತ್ತು ಮಾರ್ಗದರ್ಶನದಂತೆ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅತಿರುದ್ರಮಹಾಯಾಗ,ಶಂಕರ ಸಪರ್ಯಾ, ಶಂಕರ ಕಿಂಕರ ಪ್ರಶಸ್ತಿ ಪ್ರದಾನ, ಶಂಕರಲೋಕ ದರ್ಶನ, ಶಂಕರ ವಿಚಾರವಿಹಾರ, ಸ್ಪರ್ಧಾಶಂಕರ, ಪುಸ್ತಕ ಶಂಕರ ಮತ್ತಿತರ ಕಾರ್ಯಕ್ರಮಗಳಿವೆ. ಆದಿಗುರು ಶಂಕರಾಚಾರ್ಯರ ಕುರಿತಾದ ಸಮಗ್ರ ಕಾರ್ಯಕ್ರಮ ಶಂಕರ ಪಂಚಮಿಯಲ್ಲಿ ಜರುಗಲಿದೆ. ವಿಶೇಷವಾಗಿ ರಾಘವೇಶ್ವರ ಭಾರತಿ ಸ್ವಾಮೀಜಿ ಅವರಿಂದ ಗಾಯನ, ವಾದನ, ನರ್ತನ,ರೂಪಕ, ದೃಶ್ಯ ವೈಭವಗಳ ಗುರುಕಥೆ ನಡೆಯಲಿದೆ' ಎಂದರು.ಮಠದ ಯಜಮಾನ ಗುರುಪಾದ ಹೆಗಡೆ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವರಾಮ ಭಟ್ಟ ಹಿರೇಕೈ, ಜಿ.ಎಸ್.ಭಟ್ ಕಲ್ಲಾಳ, ಎಂ.ವಿ.ಹೆಗಡೆ ಮುತ್ತಿಗೆ, ಭಾಸ್ಕರ ಹೆಗಡೆ ಕೊಡಗಿಬೈಲ್, ನಾಗರಾಜ ಭಟ್, ಸುಬ್ಬಣ್ಣ ಸಂಗೋಳಿಮನೆ, ಎಂ.ವಿ.ಹೆಗಡೆ ವಡ್ಡಿನಗದ್ದೆ, ಶ್ರೀಕಾಂತ ಹೆಗಡೆ ಕಲ್ಲಾರೆಮನೆ, ಕಲ್ಪನಾ ತಲವಾಟ, ಶಾಂಭವಿ ಮತ್ತಿತರರು ಉಪಸ್ಥಿತರಿದ್ದರು. ಆರ್.ಎಸ್.ಭಟ್ ಪ್ರಾರ್ಥನೆ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)