ಭಾನುವಾರ, ಜೂನ್ 20, 2021
20 °C
ಮಟಮಾರಿ ಶಿವಾನಂದಮಠ ಚತುರ್ಥ ವಾರ್ಷಿಕೋತ್ಸವ ಇಂದಿನಿಂದ

ಪಂಚಮ ವೇದಾಂತ ಸಮ್ಮೇಳನ: ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ತಾಲ್ಲೂಕಿನ ಸುಕ್ಷೇತ್ರ ಮಟಮಾರಿ ಗ್ರಾಮದ  ಮುಗಳಖೋಡ ಯಲ್ಲಾಲಿಂಗ ಮಹಾ­ರಾಜರ ಶಿವಾನಂದಮಠದ ಚತುರ್ಥ ವಾರ್ಷಿಕೋತ್ಸವ ಪಂಚಮ ವೇದಾಂತ ಸಮ್ಮೇಳನ ಹಾಗೂ ಸರ್ಪ­ಭೂಷಣ ಶಿವಯೋಗಿಗಳು ರಚಿಸಿದ ಕೈವಲ್ಯ ಕಲ್ಪವಲ್ಲರಿ ಗ್ರಂಥ ಬಿಡುಗಡೆ ಮತ್ತು ಮಹಾತ್ಮರ ತುಲಾಭಾರ ಕಾರ್ಯಕ್ರಮ ಮಾ.17ರಿಂದ 19ರವರೆಗೆ ನಡೆಯಲಿದೆ ಎಂದು ಜ್ಞಾನಾನಂದ ಸ್ವಾಮೀಜಿ ಹೇಳಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಟಮಾರಿ ಶಿವಾನಂದಮಠದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮೂರು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.17ರಂದು ಬೆಳಿಗ್ಗೆ ಭಕ್ತಿಯಿಂದಲೇ ಮುಕ್ತಿ ವಿಷಯ ಕುರಿತ ಪ್ರವಚನ ನಡೆಯುವುದು, ಬಿಚ್ಚಾಲಿ ಮಟ­ಮಾರಿ, ಗಬ್ಬೂರಿನ ಸಾವಿರ ದೇವರ ಸಂಸ್ಥಾನಮಠದ ವೀರಭದ್ರ ಶಿವಾಚಾರ್ಯ ಸ್ವಾಮಿ ಸಾನ್ನಿಧ್ಯ ವಹಿಸಲಿದ್ದಾರೆ. ಜಮಖಂಡಿಯ ಸಹಜಾನಂದಾವಧೂತ ಸ್ವಾಮೀಜಿ, ಮಿಟ್ಟಿಮಲ್ಕಾಪುರದ ನಿಜಾನಂದ ಸ್ವಾಮೀಜಿ ಪಾಲ್ಗೊಳ್ಳುವರು.ಅಧ್ಯಕ್ಷತೆಯನ್ನು ಗದಗದ ಕದಳಿವನ ಮಠದ ಅಕ್ಕಮಹಾದೇವಿ ತಾಯಿ ಅಧ್ಯಕ್ಷತೆ ವಹಿಸಲಿ­ದ್ದಾರೆ. ಸಂಜೆ 6ಕ್ಕೆ ನಿಮ್ಮ  ಚರಣ ಕಮಲದೊಳಗಾನು ತುಂಬಿ ಎಂಬ ಬಸವಣ್ಣನವರ ಕುರಿತ ಪ್ರವಚನ ನಡೆಯುವುದು. ಗುಡೇಬಲ್ಲೂರಿನ ಶಿವಾನಂದಮಠದ ಶಿವಾನಂದ ಮಹಾರಾಜ್, ಗಾರಲದಿನ್ನಿಯ ಮೌನೇಶ ಮಹಾರಾಜ ಸಾನಿಧ್ಯವಹಿಸುವರು. ಅಧ್ಯಕ್ಷತೆಯನ್ನು ಗುರುನಾಥ ಮಹಾರಾಜ ವಹಿಸಲಿದ್ದಾರೆ ಎಂದು ಹೇಳಿದರು.18ರಂದು ಮಾಡಲಿಲ್ಲವೇ ತಪವ ಮಾಡಲಿಲ್ಲವೇ ಎಂಬ ವಿಷಯ ಕುರಿತ ಪ್ರವಚನ ನಡೆಯಲಿದ್ದು, ಗೋಕಾಕ ಚಿಕ್ಕನಂದಿಯ ಸಹಜಯೋಗಿ ಸಹಜಾ­ನಂದ ಸ್ವಾಮೀಜಿ ಸಾನ್ನಿಧ್ಯವಹಿಸುವರು.  ಅದೇ ದಿನ ಸಂಜೆ ರಾಯಚೂರಿನ ಅರಳೆಬಂಡೆಮಠದ ಮರಿಸ್ವಾಮಿ  ಸಾನಿಧ್ಯದಲ್ಲಿ ಧನ್ಯೋ ಗೃಹಸ್ಥಾಶ್ರಮಿ ಕುರಿತು ಪ್ರವಚನ ನಡೆಯಲಿದೆ. 19ರಂದು ಬೆಳಿಗ್ಗೆ 7.30ಕ್ಕೆ ಕೊಟ್ಟಿದ್ದು ಕೆಟ್ಟಿತೆನಬೇಡ ಎಂಬ ವಿಷಯ ಕುರಿತ ಪ್ರವಚನ ಬಿಜಾಪುರದ ಷಣ್ಮುಖಾರೂಢ ಮಠದ ಅಭಿನವ ಶಿವಪುತ್ರ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿದೆ ಎಂದು ಹೇಳಿದರು.ಗ್ರಂಥ ಬಿಡುಗಡೆ: 19ರಂದು ಬಿಜಾಪುರದ ಷಣ್ಮುಖಾರೂಢ ಮಠದ ಅಭಿನವ ಶಿವಪುತ್ರ ಸ್ವಾಮೀಜಿ ಅವರು ಕೈವಲ್ಯ ಕಲ್ಪವಲ್ಲರಿ ಎಂಬ ಗ್ರಂಥ ಬಿಡುಗಡೆ ಮಾಡಲಿದ್ದಾರೆ.  ಪ್ರಣವ ಧ್ವಜಾರೋಹಣವನ್ನು ಬಾಗಲಕೋಟೆ ಜಿಲ್ಲೆಯ ಕಾಡಕೊಪ್ಪದ ಪೂರ್ಣಾ­ನಂದಾಶ್ರಮದ ದಯಾನಂದಸರಸ್ವತಿ ಸ್ವಾಮೀಜಿ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.ಶಿವಾನಂದಮಠವು ಅನ್ನದಾನ ಮತ್ತು ಜ್ಞಾನದಾನ ನೀಡುವ ಮಠವಾಗಿದ್ದು, ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಭಕ್ತಿಯ ಕೇಂದ್ರವಾಗಿದೆ. ಸಂಪ್ರದಾಯ, ಸಂಸ್ಕೃತಿ ಬೆಳೆಸುವ ಕೇಂದ್ರವಾಗಿದೆ. ಮೂರು ದಿನದ ಕಾರ್ಯ­ಕ್ರಮದಲ್ಲಿ ಅಪಾರ ಭಕ್ತರು ಪಾಲ್ಗೊಳ್ಳಿದ್ದಾರೆ  ಎಂದು ವೆಂಕಟೇಶ ಹೀರಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಗಾರಲದಿನ್ನಿ ಮೌನೇಶ ಮಹಾರಾಜ ಸ್ವಾಮಿ, ಮಟಮಾರಿ ಗ್ರಾಮದ ಮುಖಂಡ ನಾಗೇಂದ್ರಪ್ಪ ಮಟಮಾರಿ, ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಏಗನೂರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.