ಪಂಚರಂಗಿ

7

ಪಂಚರಂಗಿ

Published:
Updated:

ತಾಯ್ತನದ  ಸಂಭ್ರಮದಲ್ಲಿ ಸೆಲಿನಾಸುಂದರಿ ಸೆಲಿನಾ ಹಿರಿತೆರೆಯಿಂದ ಮಾಯವೇ? ಅಂತ ಅಭಿಮಾನಿಯೊಬ್ಬ ಟ್ವೀಟಿಸಿದ್ದಕ್ಕೆ ಸೆಲಿನಾ ಜೇಟ್ಲಿ, ಪ್ರತಿಕ್ರಿಯಿಸಿದ್ದಾಳೆ. ಇಲ್ಲಪ್ಪ, ಅವಳಿಗಳನ್ನು ಹೊತ್ತು ಹೆಜ್ಜೆ ಹಾಕಲಾರೆ. ತಾಯ್ತನದ ಸುಖ ಅನುಭವಿಸುತ್ತಿದ್ದೇನೆ ಎಂದು.ಹೋಟೆಲ್ ಉದ್ಯಮಿ ಪೀಟರ್ ಅವರನ್ನು ಸೆಲಿನಾ ಮದುವೆಯಾದ ನಂತರ ಈಗ ತಾಯ್ತನದ ರಜೆ ಪಡೆದಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.ಏಪ್ರಿಲ್‌ನಲ್ಲಿ ಹೆರಿಗೆಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಅವಳಿಗಳೆರಡೂ ಅವಸರ ಮಾಡುತ್ತಿವೆ. ಮಾರ್ಚ್‌ನಲ್ಲಿಯೇ ಪೀಟರ್ ಹಾಗೂ ತಾನು ಅಪ್ಪ ಅಮ್ಮ ಆಗಬಹುದು ಎಂದೂ ಸಂದೇಶ ರವಾನಿಸಿದ್ದಾರೆ.ಸಾವಿರಾರು ಶುಭ ಹಾರೈಕೆಯ ಸಂದೇಶಗಳಿಗೆ ಧನ್ಯವಾದ ಹೇಳಿರುವ ಸೆಲಿನಾ ತಮ್ಮ ಹೆರಿಗೆಯ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.ತಾಯ್ತನದ ಸಂಭ್ರಮ ಎಲ್ಲರಿಗೂ ದಕ್ಕುತ್ತದೆ. ಆದರೆ ಅವಳಿಗಳ ಸಡಗರವೇ ಬೇರೆ. ಈ ಕ್ಷಣಕ್ಕಾಗಿ ತಾವು ಮತ್ತು ಪೀಟರ್ ಕಾಯುತ್ತಿರುವುದಾಗಿ ಸೆಲಿನಾ ಹೇಳಿದ್ದಾರೆ.

ಹೆರಿಗೆಯ ನಂತರ ಸೆಲಿನಾ ಜೇಟ್ಲಿ `ವಿಲ್ ಯು ಮ್ಯಾರಿ ಮಿ~ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲ್ಯದ ಕನವರಿಕೆಯಲ್ಲಿ ಪ್ರಿಯಾಂಕಾ

`ಸಣ್ಣವರಾಗಿಯೇ ಇರಬೇಕು. ತೀರ್ಮಾನ ತೆಗೆದುಕೊಳ್ಳುವುದು ಆಗೆಲ್ಲ ಅದೆಷ್ಟು ಸುಲಭವಾಗಿತ್ತು. ಇದೀಗ ಎಲ್ಲಿಗೆ ಹೋಗಬೇಕು? ಯಾವ ಉಡುಗೆ ತೊಡಬೇಕು? ಹೇಗೆ ಕಾಣಬೇಕು? ಎಲ್ಲಕ್ಕೂ ಯೋಚಿಸಬೇಕು... ಅದಕ್ಕಿಂತ ಸಣ್ಣವರಾಗಿಯೇ ಇರಬೇಕಿತ್ತು~ ಎಂದು ಪ್ರಿಯಾಂಕಾ ಚೋಪ್ರಾ ಕನವರಿಸುತ್ತಿದ್ದಾರೆ.`ಇದೀಗ ಎಲ್ಲದಕ್ಕೂ ಯೋಚಿಸಬೇಕಿದೆ. ನಮ್ಮಿಷ್ಟಕ್ಕಿಂತಲೂ ಜನರು ಹೇಗೆ ಪ್ರತಿಕ್ರಿಯಿಸಬಹುದು? ಎನೆಂದುಕೊಳ್ಳಬಹುದು ಎನ್ನುವುದಕ್ಕೇ ಹೆಚ್ಚಿನ ಪ್ರಾಮುಖ್ಯ ನೀಡಬೇಕಾಗುತ್ತದೆ. ಸಣ್ಣವರಿದ್ದಾಗ ದೊಡ್ಡವರಾಗಲು ಹಂಬಲಿಸುತ್ತೇವೆ.

 

ಆದರೆ ಅಮ್ಮ ಆಗೆಲ್ಲ ಎಚ್ಚರಿಸುತ್ತಿದ್ದರು. ಒಮ್ಮೆ ದೊಡ್ಡವರಾದರೆ, ಬಾಲ್ಯಗೆ ಹಿಂದಿರುಗಲು ಹಪಹಪಿಸುತ್ತೀರಿ... ಬಹುತೇಕ ಸಂದರ್ಭಗಳಲ್ಲಿ ಅಪ್ಪ-ಅಮ್ಮ ಅದೆಷ್ಟು ಖಚಿತವಾಗಿ ಸರಿಯಾದುದ್ದನ್ನೇ ಹೇಳುತ್ತಾರಲ್ಲ ಎಂದು ಸೋಜಿಗವೆನಿಸುತ್ತದೆ~ ಎಂದೆಲ್ಲ ಪ್ರಿಯಾಂಕಾ ಹೇಳಿದ್ದಾರೆ.ಸಾಧ್ಯವಿದ್ದರೆ ಬಾಲ್ಯಕ್ಕೆ ಮರಳುವ ಕನಸನ್ನೇ ಮತ್ತೆಮತ್ತೆ ಕನವರಿಸುತ್ತಿರುವ ಪ್ರಿಯಾಂಕಾ ಸದ್ಯ ರಣಬೀರ್ ಕಪೂರ್ ಜೊತೆಗೆ `ಬರ್ಫಿ~ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry