ಪಂಚಾಮೃತ ನಿನಾದ

7

ಪಂಚಾಮೃತ ನಿನಾದ

Published:
Updated:
ಪಂಚಾಮೃತ ನಿನಾದ

ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಲ್ಲೇಶ್ವರದ ಸೇವಾ ಸದನದಲ್ಲಿ ಎರಡು ದಿನಗಳ ಸುಗಮ ಸಂಗೀತೋತ್ಸವ ಆಯೋಜಿಸಿತ್ತು.`ಅಂತರಂಗದಲಿ ಹರಿಯ ಕಾಣದವಾ~, `ಕಡಗೋಲ ತಾರೆನ್ನ ಚಿನ್ನವೇ~, `ದಾರಿ ಯಾವುದಯ್ಯಾ ವೈಕುಂಠಕ್ಕೆ ದಾರಿ ತೋರಿಸಯ್ಯ~, `ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ~ `ಯಾವ ಮೋಹನ ಮುರಳಿ ಕರೆಯಿತು ದೂರ ತೀರಕ್ಕೆ ನಿನ್ನನು~ ಹೀಗೆ ಸಾಲು ಸಾಲು ಗೀತೆಗೆಳ ಗಾಯನ ಪ್ರೇಕ್ಷಕರನ್ನು ರಂಜಿಸಿದವು.ಗಾಯಕರಾದ ಆರ್.ಪರಮಶಿವನ್, ಪಾರ್ವತೀಸುತ, ಶಶಿಧರ ಕೋಟೆ, ದಿವಾಕರ ಕಶ್ಯಪ್, ನರಸಿಂಹ ಹರೀಶ್, ಎಸ್.ಶ್ರೀಕಾಂತ್, ಕೆ.ಎಸ್.ಸುರೇಖಾ, ಎಂ.ಎಸ್.ಶ್ರೀಕೃಪಾ, ವಂದನಾಮೂರ್ತಿ,ಯುವ ಪ್ರತಿಭೆಗಳಾದ ಭಾವನಾ ಎನ್.ಮೂರ್ತಿ,ಎಚ್.ಎಸ್.ಪವಿತ್ರಾ, ಎ.ಎನ್.ರಶ್ಮಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಅಭ್ಯಾಸಕುಂಜ, ಸಂಗೀತ ಸಾಧನ, ಪಂಚಾಮೃತ ಸುಗಮ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳ ಗೀತಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಂಗು ತುಂಬಿದರು.ಎಂ.ಬಿ.ಶಶಿಧರ್, ಆರ್.ಲೋಕೇಶ್, ಮೋಹನ್, ಗುರುನಂದನ್, ಅಭಿಷೇಕ್, ಅಭಿಜಿತ್, ವಸಂತಕುಮಾರ್, ಭರತ್, ಬಿ.ಕೆ.ಶಶಿಧರ್,ರವಿ ವಾದ್ಯ ಸಹಕಾರ ನೀಡಿದರು. ಆನೂರು ಕೃಷ್ಣಶರ್ಮಾ ಕಾರ್ಯಕ್ರಮ ಉದ್ಘಾಟಿಸಿದರು.ವಿ.ಮನೋಹರ್, ಅಕಾಡೆಮಿಯ ಸಂಸ್ಥಾಪಕಿ ಗಾಯತ್ರಿ ಕೇಶವಮೂರ್ತಿ, ಎ.ಎಂ.ಚಂದ್ರಶೇಖರ್, ವೀಣಾ ಅಶೋಕ್, ಎಂ.ದಿನೇಶ್‌ರಾವ್, ಎಂ.ಮೋಹನ್‌ರಾವ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry