ಪಂಚಾಯತ್‌ ನೌಕರರ ಪ್ರತಿಭಟನೆ

7

ಪಂಚಾಯತ್‌ ನೌಕರರ ಪ್ರತಿಭಟನೆ

Published:
Updated:

ಬೆಳಗಾವಿ: ಪಂಚಾಯತ್‌ ನೌಕರರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯತ್‌ ನೌಕರರ ಸಂಘದ ಸದಸ್ಯರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಡಾ. ಅಂಬೇಡ್ಕರ್‌ ಉದ್ಯಾನದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು, ಅಧಿಕಾರಿಗಳು ನಿರ್ಲಕ್ಷ್ಯ್ಯ ಧೋರಣೆ ಅನುಸರಿಸುತ್ತಿ ದ್ದಾರೆ ಎಂದು ಆರೋಪಿಸಿ ಘೋಷಣೆ ಕೂಗಿದರು.ಪಂಚಾಯಿತಿಗಳಲ್ಲಿ ಕಾರ್ಯನಿವ ರ್ಹಿಸುತ್ತಿರುವ ಸಹಾಯಕ, ನೀರು ಬಿಡುವ ಕಾರ್ಮಿಕ, ಸಿಪಾಯಿ, ಕಸಗೂ ಡಿಸುವವರು ಮತ್ತಿತರರಿಗೆ ಕನಿಷ್ಟ ವೇತನ, ರಜೆ ಸೌಲಭ್ಯ, ಸೇವಾ ಪುಸ್ತಕ, ಬಡ್ತಿ, ವೇತನಕ್ಕಾಗಿ ಪ್ರತ್ಯೇಕ ಬ್ಯಾಂಕ್‌ ಖಾತೆ ಮತ್ತಿತರ ಸೌಲಭ್ಯಗಳನ್ನು ನೀಡಬೇಕು ಎಂದು ಸರ್ಕಾರದಿಂದ ಮತ್ತು ಜಿಲ್ಲಾ ಪಂಚಾಯಿತಿಯಿಂದ ಆದೇಶ ಗಳು ಆಗಿದ್ದರೂ ಜಿಲ್ಲೆಯ ಬಹಳಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಇವು ಜಾರಿಗೆ ಬಂದಿಲ್ಲ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕಾರ್ಯನಿರ್ವಹಣಾ ಧಿಕಾರಿಗಳ ಸಭೆ ಕರೆದು ಪಂಚಾಯತ್‌ ನೌಕರರ ಬೇಡಿಕೆ ಗಳ ಬಗ್ಗೆ ಚರ್ಚಿಸಿ ಈಡೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸ ಲಾಗಿದೆ.ಸಂಘದ ಅಧ್ಯಕ್ಷ ವಿ.ಪಿ.ಕುಲಕರ್ಣಿ, ಜಿ.ಎಂ.ಜೈನೆಖಾನ, ಯು.ಎಫ್‌. ದಂಡಿನ, ವಿ.ಎಸ್‌.ಪಟ್ಟೇದ, ಎಸ್‌.ಬಿ. ಭಜಂತ್ರಿ, ಕಲ್ಲಪ್ಪ ಮಾದರ, ಬಿ.ಎನ್‌. ಪಾಟೀಲ, ವಾಗಪ್ಪ ಚೌಗಲಾ, ಅಮ್ಜದ್‌ ಜಮಾದಾರ, ದುಗರ್ಪ್ಪ ಕುರಂಗಿ, ನಾಗೇಶ ನಾವಲಗಿ ು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry