ಬುಧವಾರ, ಏಪ್ರಿಲ್ 21, 2021
30 °C

ಪಂಚಾಯತ್ ರಾಜ್-ಅರಿವು ಅಗತ್ಯ: ವಿಲ್‌ಫ್ರೆಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿದ್ದ ಗ್ರಾಮ ಪಂಚಾಯಿತಿ ವ್ಯವಸ್ಥೆಯ ಮೇಲೆ ಹೊಡೆತ ಬೀಳುತ್ತಿದ್ದು, ಪಂಚಾಯತ್‌ರಾಜ್‌ನ ಮೂಲ ಆಶಯಗಳನ್ನು ಜಾರಿಗೆ ತರುವಲ್ಲಿ ಮತ್ತು ವ್ಯವಸ್ಥೆ ದುರ್ಬಲವಾಗದಂತೆ ರಕ್ಷಿಸುವಲ್ಲಿ ಒಗ್ಗೂಡಿ ಶ್ರಮಿಸಬೇಕಾದ ಅಗತ್ಯವಿದೆ ಎಂದು ಮೈಸೂರಿನ ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಲಹೆಗಾರ ವಿಲ್‌ಫ್ರೆಡ್ ಡಿಸೋಜಾ ಹೇಳಿದರು.ಪುತ್ತೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಜನವಿಕಾಸ ಸಂಸ್ಥೆಯ ಜಿಲ್ಲಾ ಸಮಿತಿಯ ವತಿಯಿಂದ  ಮಂಗಳವಾರ ನಡೆದ ಪಂಚಾಯತ್ ರಾಜ್ ಸಬಲೀಕರಣ ದಿನಾಚರಣೆ ಮತ್ತು ಜಿಲ್ಲಾ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಪಂಚಾಯತ್‌ರಾಜ್ ವ್ಯವಸ್ಥೆಗೆ ಸರಿಯಾದ ಬದಲಾವಣೆ ತರುವಲ್ಲಿ ಪಂಚಾಯಿತಿ ಸದಸ್ಯರು ಹಾಗೂ ವಿಕೇಂದ್ರೀಕರಣಕ್ಕೆ ಪೂರಕವಾಗಿ ಯೋಚಿಸುವ ಮನಸ್ಸುಗಳು ಬೆಂಬಲ ನೀಡಬೇಕಾಗಿದೆ ಎಂದರು.ನಾಡಿನ ಎಲ್ಲಾ ಸಮಸ್ಯೆಗಳಿಗೆ ಜನಪ್ರತಿನಿಧಿಗಳೇ ಕಾರಣ ಎನ್ನುವ ಮನೋಭಾವನೆ ಬದಲಾಗಬೇಕಾಗಿದೆ. ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ಜನಪ್ರತಿನಿಧಿಗಳದ್ದಾಗಿದೆ ಎಂಬು ದನ್ನು ನಾವು ಮರೆಯುವಂತಿಲ್ಲ ಎಂದರು. ಜನವಿಕಾಸ ಪ್ರವರ್ತನಾ ಸಮಿತಿಯ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಅಧ್ಯಕ್ಷತೆ ವಹಿಸಿದ್ದರು.ತಹಸೀಲ್ದಾರ್ ಕುಳ್ಳೇ ಗೌಡ, ತಾ.ಪಂ. ಉಪಾಧ್ಯಕ್ಷೆ ಪುಲಸ್ಯ ರೈ ಅತಿಥಿಗಳಾಗಿದ್ದರು.ಎಸ್‌ಐಆರ್‌ಡಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಮೇಘಾ ಪಾಲೆ ತ್ತಾಡಿ, ಬೆಳ್ತಂಗಡಿಯ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್, ಬಂಟ್ವಾಳದ ಸಂಪನ್ಮೂಲ ವ್ಯಕ್ತಿ ಉಮಾನಾಥ ಶೆಟ್ಟಿ, ತಾ.ಪಂ ಸದಸ್ಯೆ ಜೊಹರಾ ನಿಸಾರ್ ಅಹ್ಮದ್ ಮತ್ತಿತರರು ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.