ಪಂಚಾಯಿತಿ ಮಹಿಳಾ ಮೀಸಲು ಮರುನಿಗದಿ

7
ಮೇ 6 ಅಥವಾ 7ರಂದು ವೇಳಾ ಪಟ್ಟಿ ಪ್ರಕಟ

ಪಂಚಾಯಿತಿ ಮಹಿಳಾ ಮೀಸಲು ಮರುನಿಗದಿ

Published:
Updated:

ಬೆಂಗಳೂರು: ಮಹಿಳಾ ಮೀಸಲಾತಿ ಸಂಬಂಧ ಕಾನೂನಿಗೆ ತಿದ್ದುಪಡಿ ಮಾಡಿರುವ ಕಾರಣ ಗ್ರಾಮ ಪಂಚಾಯಿತಿಯ ವಾರ್ಡ್‌ ಮೀಸಲಾತಿಯಲ್ಲೂ ಸ್ವಲ್ಪ ಏರುಪೇರಾಗಲಿದೆ.‘ಈ ಹಿಂದೆ ಶೇ 50ಕ್ಕಿಂತ ಕಡಿಮೆಯಾಗದಂತೆ ಮಹಿಳಾ ಮೀಸಲಾತಿ ನಿಗದಿಪಡಿಸಲಾಗಿತ್ತು. ಇದನ್ನು ತಿದ್ದುಪಡಿ ಮೂಲಕ ಶೇ 50 ಮೀರಬಾರದು ಎಂದು ಮಾಡಲಾಗಿದೆ. ಇತ್ತೀಚೆಗೆ ರಾಜ್ಯಪಾಲರು ಈ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಿರುವ ಕಾರಣ ಗ್ರಾಮ ಪಂಚಾಯಿತಿ ಚುನಾವಣಾ ವೇಳಾ ಪಟ್ಟಿ ಘೋಷಣೆಗೂ ಮುನ್ನವೇ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಪರಿಷ್ಕರಿಸುವ ಕೆಲಸ ನಡೆಯುತ್ತಿದೆ. ಇದರಿಂದಾಗಿ ಮಹಿಳಾ ಮೀಸಲು ಸ್ಥಾನಗಳ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆ ಆಗಲಿದೆ.ಉದಾಹರಣೆಗೆ 9 ವಾರ್ಡ್‌ ಇರುವ ಗ್ರಾಮ ಪಂಚಾಯಿತಿಯಲ್ಲಿ ಮೊದಲಿನ ಕಾನೂನಿನ ಪ್ರಕಾರ (ಶೇ 50ಕ್ಕಿಂತ ಕಡಿಮೆ ಇಲ್ಲದಂತೆ) ಐದು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲು ಇಡಬೇಕಿತ್ತು. ಹೊಸ ತಿದ್ದುಪಡಿಯಿಂದ (ಶೇ 50 ಮೀರದಂತೆ) ಅದು ನಾಲ್ಕು ಸ್ಥಾನಗಳಿಗೆ ನಿಗದಿಯಾಗಲಿದೆ. ಹೀಗೆ ಹಲವು ಕಡೆ ಮಹಿಳಾ ಮೀಸಲಾತಿ ಕಡಿಮೆ ಆಗಲಿದೆ.ಈ ಕಾರಣದಿಂದಲೇ ಪರಿಷ್ಕೃತ  ಮೀಸಲಾತಿ ಪಟ್ಟಿಯ ಸಿದ್ಧತೆಯಲ್ಲಿ ಆಯೋಗ ತೊಡಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ತಹಶೀಲ್ದಾರ್‌ಗಳ ಸಭೆ ನಡೆಸುವುದರ ಮೂಲಕ ಮಹಿಳಾ ಮೀಸಲಾತಿಯನ್ನು ಮರು ನಿಗದಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಈ ಕೆಲಸ ಮುಗಿಯಲಿದೆ ಎನ್ನಲಾಗಿದೆ.ಚುನಾವಣಾ ಘೋಷಣೆ: ಮೇ ಕೊನೆ ಮತ್ತು ಜೂನ್‌ ಮೊದಲ ವಾರದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುವುದು ಖಚಿತ. ಈ ಸಲುವಾಗಿ ಚುನಾವಣಾ ವೇಳಾ ಪಟ್ಟಿಯನ್ನು ಇದೇ 6 ಅಥವಾ 7ರಂದು ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry