ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ಪ್ರಕಟ

7

ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ಪ್ರಕಟ

Published:
Updated:

ಚಿತ್ರದುರ್ಗ: ತಾಲ್ಲೂಕಿನ ಗ್ರಾಮ ಪಂಚಾಯ್ತಿಯ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರನ್ನು ಎರಡನೇ ಅವಧಿಗೆ ಆಯ್ಕೆಗೆ ಚುನಾವಣೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ರುದ್ರಮುನಿ ತಿಳಿಸಿದ್ದಾರೆ.ಆಲಗಟ್ಟ ಗ್ರಾಮ ಪಂಚಾಯ್ತಿಗೆಡಿ. 24, ಕೂನಬೇವುಗೆ  27, ಯಳಗೋಡಿನಲ್ಲಿ  28, ದ್ಯಾಮ ವ್ವನಹಳ್ಳಿಗೆ  29ರಂದು ನಡೆಯಲಿದೆ. ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸುವರು.ಭರಮಸಾಗರ  24, ಚೋಳಗಟ್ಟ  27, ಸಿದ್ದಾಪುರ  28, ಹಿರೇಗುಂಟನೂರು  29 ಚುನಾವಣಾಧಿಕಾರಿ  ಆಗಿ ತಹಶೀಲ್ದಾರ್ ಭಾಗವಹಿಸುವರು. ಮಾಡನಾಯಕನಹಳ್ಳಿ  24, ಕೊಳಹಾಳ್ 27, ಗುಡ್ಡದರಂಗವ್ವನಹಳ್ಳಿ  28, ಹುಲ್ಲೂರು  29ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಚುನಾವಣಾಧಿಕಾರಿ ಆಗಿ ಭಾಗವಹಿಸುವರು.ಕೋಗುಂಡೆ  24, ಲಕ್ಷ್ಮೀಸಾಗರ  27, ಚಿಕ್ಕಗೊಂಡನಹಳ್ಳಿ 28, ಮದಕರಿಪುರ  29 ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚುನಾವಣಾಧಿಕಾರಿಗಳು. ಅನ್ನೆಹಾಳ್ 24, ಅಳಗವಾಡಿ 27, ಜಂಪಣ್ಣನಾಯಕನಕೋಟೆ  28 ಹಾಗೂ ಮುದ್ದಾಪುರ  29 ಚುನಾವಣಾಧಿಕಾರಿ ಆಗಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭಾಗವಹಿಸುವರು. ದೊಡ್ಡಸಿದ್ದವ್ವನಹಳ್ಳಿಯಲ್ಲಿ 24, ಬೊಮ್ಮೇನಹಳ್ಳಿ 27, ಐನಹಳ್ಳಿ 28, ಮೆದೇಹಳ್ಳಿ 29 ಚುನಾವಣಾಧಿಕಾರಿ ಆಗಿ ಜಿಲ್ಲಾ ತರಬೇತಿ ಸಂಸ್ಥೆ ಉಪ ಪ್ರಾಚಾರ್ಯರು ಭಾಗವಹಿಸುವರು.ಸೊಂಡೇಕೊಳ 24, ತುರುವನೂರು 26, ಜಾನುಕೊಂಡ 27, ಭೀಮಸಮುದ್ರ  29 ಚುನಾವಣಾಧಿಕಾರಿ ಜಲಾನಯನ ಅಭಿವೃದ್ಧಿ ಇಲಾಖೆ ಸಹಾಯಕ ಕೃಷಿ ಅಧಿಕಾರಿ. ಇಸಾಮುದ್ರ  24, ಕಾಲಗೆರೆ 27, ಗೋನೂರು 28, ಸಿರಿಗೆರೆ  29 ಚುನಾವಣಾಧಿಕಾರಿ ತೋಟಗಾರಿಕೆ ಸಹಾಯಕ ನಿರ್ದೇಶಕರು. ಇಂಗಳದಾಳ್ 24, ಮಠದಕುರುಬರಹಟ್ಟಿ 26, ಬೆಳಗಟ್ಟ 27 ಹಾಗೂ 28ರಂದು ಚಿಕ್ಕಬೆನ್ನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಚುನಾವಣಾಧಿಕಾರಿ ಆಗಿ ಯೋಜನಾ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭಾಗವಹಿಸುವರು ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry