ಪಂಚೇಂದ್ರಿಯ ಉದ್ಯಾನ

7

ಪಂಚೇಂದ್ರಿಯ ಉದ್ಯಾನ

Published:
Updated:

ನವದೆಹಲಿಯ ಪಂಚೇಂದ್ರಿಯ ಉದ್ಯಾನವನ (ಗಾರ್ಡನ್ ಆಫ್ ಫೈವ್ ಸೆನ್ಸನ್) ಹೆಸರಿಗೆ ತಕ್ಕಂಥದ್ದು. ಅಲ್ಲಿ ಸಂಚರಿಸಿದರೆ ಪಂಚೇಂದ್ರಿಯಗಳು ಪ್ರಫುಲ್ಲಗೊಳ್ಳುತ್ತವೆ.ಇಪ್ಪತ್ತು ಎಕರೆ ವ್ಯಾಪ್ತಿಯಲ್ಲಿರುವ ಉದ್ಯಾನದಲ್ಲಿ ವಿವಿಧ ವಿಭಾಗಗಳಿವೆ. `ದಿ ಖಾಸ್ ಬಾಗ್~ನಲ್ಲಿ ಮೊಹಮ್ಮದೀಯ ಶೈಲಿಯ ಸಸ್ಯವೈವಿಧ್ಯವಿದೆ. ಸಣ್ಣಪುಟ್ಟ ಜಲಪಾತಗಳು, ಹಾದಿಗುಂಟ ಅರಳಿದ ಹೂಗಳು ಕಣ್ಮನ ಸೆಳೆಯುತ್ತವೆ. `ನೀಲ್ ಬಾಗ್~ನಲ್ಲಿ ಕೊಳ.

ಅದರಲ್ಲಿ ಕುಮುದದ ಹೂಗಳು. ಸೆರ‌್ಯಾಮಿಕ್ ಗಂಟೆಗಳ ನಿನಾದವೂ ಅಲ್ಲುಂಟು.

 

`ಕಲರ್ ಗಾರ್ಡನ್~ನಲ್ಲಿ ಹೂಗಳ ಪರಿಮಳ ಆಘ್ರಾಣಿಸುವುದು ಸುಮಧುರ ಅನುಭವ. ಅಲ್ಲಿನ ಹೂಗಿಡಗಳ ವಿನ್ಯಾಸ ಮನಸೂರೆಗೊಳ್ಳುತ್ತದೆ. ಇದು ಉದ್ಯಾನ ವಿನ್ಯಾಸಕರ ಸ್ವರ್ಗ. ಎನಾಜ್, ಸುಬೋಧ್ ಕೇರ್ಕರ್, ರತ್ನಾಬಾಲಿ ಕಾಂತ್ ಮೊದಲಾದ ಕಲಾವಿದರ ಶಿಲ್ಪಗಳು ಅಲ್ಲಿವೆ.

 

ಅಂಗೂರಿದೇವಿ, ಗಿರಿರಾಜ್ ಶಾ ಅವರ ಟೆರಾಕೋಟಾ ಕಲಾಕೃತಿಗಳು, ಶಾಂತಿಲಾಲ್ ಜೋಷಿಯವರ ಪೇಂಟಿಂಗ್‌ಗಳು ಕೂಡ ಉದ್ಯಾನದಲ್ಲಿ ತಾವು ಪಡೆದುಕೊಂಡಿವೆ.

ಫುಡ್‌ಕೋರ್ಟ್ ಹಾಗೂ ಶಾಪಿಂಗ್ ಕೋರ್ಟ್‌ಗಳಲ್ಲದೆ ಉದ್ಯಾನದಲ್ಲಿ ಸೌರಶಕ್ತಿಯ ಪಾರ್ಕ್ ಕೂಡ ಉಂಟು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry