ಪಂಜ: ಬ್ರಹ್ಮರಥೋತ್ಸವ ಇಂದು

7

ಪಂಜ: ಬ್ರಹ್ಮರಥೋತ್ಸವ ಇಂದು

Published:
Updated:
ಪಂಜ: ಬ್ರಹ್ಮರಥೋತ್ಸವ ಇಂದು

ಸುಬ್ರಹ್ಮಣ್ಯ: ಪಂಜ ಪಂಚಲಿಂಗೇಶ್ವರ ದೇವಳದಲ್ಲಿ ಬುಧವಾರ ರಾತ್ರಿ ವೈಭವದ ಬ್ರಹ್ಮರಥೋತ್ಸವ ನಡೆಯಲಿದೆ.

ದೇವಳದ ವರ್ಷಾವಧಿ ಜಾತ್ರಾಮಹೋತ್ಸವಕ್ಕೆ ಭಕ್ತರಿಂದ ಹಸಿರು ಕಾಣಿಕೆ ಸಮರ್ಪಣೆ ಭಾನುವಾರ ನಡೆಯಿತು.ಪಂಜದ ಪುತ್ಯಕಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ವಿವಿಧ ಕಡೆಗಳಿಂದ ತಂದ ಹಸಿರು ಕಾಣಿಕೆಯು ಮೆರವಣಿಗೆ ಮೂಲಕ ದೇವಳಕ್ಕೆ ಸಮರ್ಪಣೆ ಗೊಂಡಿತು.ಸೋಮವಾರ ಸಂಜೆ ಬಲಿ, ರಾತ್ರಿ ಉತ್ಸವ ಹಾಗೂ ಮಹಾ ಪೂಜೆ ನಡೆಯಿತು. ಮಂಗಳವಾರ ಬೆಳಿಗ್ಗೆ ದೇವರ ದರ್ಶನ ಬಲಿ ಮತ್ತು ಬಟ್ಟಲು ಕಾಣಿಕೆ, ರಾತ್ರಿ ದೀಪೋತ್ಸವ ನಡೆಯಿತು. ಸಾವಿರಾರು ಭಕ್ತರು ದೇವರ ದರುಶನ ಬಲಿಯಲ್ಲಿ ಭಾಗವಹಿಸಿದರು.ದರ್ಶನ ಬಲಿಯ ಸಂದರ್ಭದಲ್ಲಿ ಬಸವ ಮತ್ತು ಕೇರಳದ ಚೆಂಡೆ ವಿಶೇಷ ಆಕರ್ಷಣೆಯಾಗಿತ್ತು. ರಾತ್ರಿ ದೇವರ ದೀಪೋತ್ಸವ ನೆರವೇರಿತು. ಈ ಬಾರಿ ಜಾತ್ರೋತ್ಸವ ನಡೆಯುವ ಸ್ಥಳದಲ್ಲಿ ಪ್ರತಿ ವರ್ಷಕ್ಕಿಂತ ಅಧಿಕ ಮಳಿಗೆಗಳನ್ನು ತೆರೆಯಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry