ಪಂದ್ಯಕ್ಕೆ ತಿರುವು ನೀಡಿದ್ದು ದೋನಿ: ಭಜ್ಜಿ

7

ಪಂದ್ಯಕ್ಕೆ ತಿರುವು ನೀಡಿದ್ದು ದೋನಿ: ಭಜ್ಜಿ

Published:
Updated:

ಬೆಂಗಳೂರು: `ನಮ್ಮ ಸೋಲಿಗೆ ಕಾರಣವಾಗಿದ್ದು ಮಹೇಂದ್ರ ಸಿಂಗ್ ದೋನಿ ಆಟ. ಅವರ ಈ ಆಟ ಪಂದ್ಯಕ್ಕೆ ರೋಚಕ ತಿರುವು ನೀಡಿತು~ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ಹರಭಜನ್ ಸಿಂಗ್ ಹೇಳಿದ್ದಾರೆ.

`ದೋನಿ ಅವರನ್ನು ನಾವು ಬೇಗ ಔಟ್ ಮಾಡಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗಿರುತಿತ್ತು. ಆದರೆ ಅವರು 20 ಎಸೆತಗಳಲ್ಲಿ ಗಳಿಸಿದ 51 ರನ್ ಪಂದ್ಯವನ್ನು ನಮ್ಮಿಂದ ಕಿತ್ತುಕೊಂಡಿತು~ ಎಂದು ಭಜ್ಜಿ ಪಂದ್ಯದ ಬಳಿಕ ನುಡಿದರು.ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ `ಎಲಿಮಿನೇಟರ್~ ಪಂದ್ಯದಲ್ಲಿ 38 ರನ್‌ಗಳಿಂದ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಶುಕ್ರವಾರ ಚೆನ್ನೈನಲ್ಲಿ ನಡೆಯಲಿರುವ ಎರಡನೇ ಅರ್ಹತಾ ಪಂದ್ಯದಲ್ಲಿ ಆಡಲು ಅವಕಾಶ ಪಡೆದುಕೊಂಡಿದೆ. ಸೂಪರ್ ಕಿಂಗ್ಸ್ ನೀಡಿದ 188 ರನ್‌ಗಳ ಗುರಿಯನ್ನು ತಲುಪಲು ಇಂಡಿಯನ್ಸ್‌ಗೆ ಸಾಧ್ಯವಾಗಲಿಲ್ಲ.`ಎರಡು ಓವರ್‌ಗಳ ಅಂತರದಲ್ಲಿ ನಾವು ಸಚಿನ್ ತೆಂಡೂಲ್ಕರ್ ಹಾಗೂ ಡ್ವೇನ್ ಸ್ಮಿತ್ ವಿಕೆಟ್ ಕಳೆದುಕೊಂಡೆವು. ಇದು ದೊಡ್ಡ ಹೊಡೆತ ನೀಡಿತು. ನಂತರದ ಕೆಲವೇ ಓವರ್‌ಗಳಲ್ಲಿ ರೋಹಿತ್ ಶರ್ಮ ಹಾಗೂ ದಿನೇಶ್ ಕಾರ್ತಿಕ್ ವಿಕೆಟ್ ಪತನವಾದವು. ಅವರು ನಮ್ಮ ಬ್ಯಾಟಿಂಗ್ ವಿಭಾಗದ ಆಧಾರಸ್ತಂಭಗಳು. ಅವರ ವಿಕೆಟ್‌ಗಳು ಬೇಗ ಪತನವಾಗಿದ್ದರಿಂದ ತಂಡ ಒತ್ತಡಕ್ಕೆ ಸಿಲುಕಿತು~ ಎಂದರು. `ರೋಹಿತ್ 18ನೇ ಓವರ್‌ವರೆಗೆ ಕ್ರೀಸ್‌ನಲ್ಲಿದ್ದಿದ್ದರೆ ಸಾಕಿತ್ತು. ಪಂದ್ಯದ ಫಲಿತಾಂಶವೇ ಬದಲಾಗುತಿತ್ತು. ಆದರೆ 13 ಓವರ್ ಆಗುವಷ್ಟರಲ್ಲಿ ನಾವು ಐದು ಪ್ರಮುಖ ವಿಕೆಟ್ ಕಳೆದುಕೊಂಡಿದ್ದೆವು. 188 ರನ್‌ಗಳ ಗುರಿ ಎದುರು ಈ ರೀತಿ ಆಗಬಾರದಿತ್ತು~ ಎಂದು ಆಫ್ ಸ್ಪಿನ್ನರ್ ಹರಭಜನ್ ನಿರಾಶೆ ವ್ಯಕ್ತಪಡಿಸಿದರು. `ನಾವು ಎರಡನೇ ಓವರ್‌ನಲ್ಲಿಯೇ ಸೂಪರ್ ಕಿಂಗ್ಸ್‌ನ ಎರಡು ವಿಕೆಟ್ ಪಡೆದಿದ್ದೆವು. ಒಂಬತ್ತನೇ ಓವರ್‌ವರೆಗೆ ಪಂದ್ಯ ನಮ್ಮ ಹಿಡಿತದಲ್ಲಿತ್ತು. ಆದರೆ ಆ ಸಂದರ್ಭವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವಲ್ಲಿ ನಾವು ಎಡವಿದೆವು~ ಎಂದರು. ಟಾಸ್ ಗೆದ್ದು ಎದುರಾಳಿಯನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿದ ಕ್ರಮವನ್ನು ಭಜ್ಜಿ ಸಮರ್ಥಿಸಿಕೊಂಡರು.ಆರಂಭಿಕ ಆಘಾತದ ಬಳಿಕ ಎಸ್.ಬದರೀನಾಥ್ ಹಾಗೂ ಮೈಕ್ ಹಸ್ಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದು ದೋನಿ ಬಿರುಸಿನ ಆಟವಾಡಲು ನೆರವಾಯಿತು ಎಂದು ಸೂಪರ್ ಕಿಂಗ್ಸ್‌ನ ಕೋಚ್ ಸ್ಟೀಫನ್ ಫ್ಲೆಮಿಂಗ್ ಅಭಿಪ್ರಾಯಪಟ್ಟರು.`ದೋನಿ ಮಿಂಚಿನಾಟ ಪ್ರದರ್ಶಿಸಿದ್ದು ಕೊನೆಯ ಐದು ಓವರ್‌ಗಳಲ್ಲಿ ನಾವು 75 ರನ್ ಸೇರಿಸಲು ಕಾರಣವಾಯಿತು. ಇಲ್ಲದಿದ್ದರೆ ನಾವು ಇಷ್ಟು ಮೊತ್ತ ಕೂಡಿ ಹಾಕಲು ಸಾಧ್ಯವಾಗುತ್ತಿರಲಿಲ್ಲ~ ಎಂದೂ ಅವರು ಹೇಳಿದರು. 

ಸ್ಕೋರ್ ವಿವರ:

ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ

5 ವಿಕೆಟ್ ನಷ್ಟಕ್ಕೆ 187

ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 149

ಸಚಿನ್ ತೆಂಡೂಲ್ಕರ್ ರನ್‌ಔಟ್ (ಜಡೇಜಾ/ಜಕಾತಿ)   11

ಡ್ವೇನ್ ಸ್ಮಿತ್ ಸಿ ರವೀಂದ್ರ ಜಡೇಜಾ ಬಿ ಶಾದಾಬ್ ಜಕಾತಿ  38

ರೋಹಿತ್ ಶರ್ಮ ಸಿ ಎಂ.ಎಸ್.ದೋನಿ ಬಿ ಅಲ್ಬಿ ಮಾರ್ಕೆಲ್  14

ದಿನೇಶ್ ಕಾರ್ತಿಕ್ ಸಿ ಎಂ.ಎಸ್.ದೋನಿ ಬಿ ಅಲ್ಬಿ ಮಾರ್ಕೆಲ್  06

ಜೇಮ್ಸ ಫ್ರಾಂಕ್ಲಿನ್ ಸಿ ಎಂ.ಎಸ್.ದೋನಿ ಬಿ ಡ್ವೇನ್ ಬ್ರಾವೊ  13

ಅಂಬಟಿ ರಾಯುಡು ಸಿ ಮುರಳಿ ವಿಜಯ್ ಬಿ ಆರ್.ಅಶ್ವಿನ್  11

ಕೀರನ್ ಪೊಲಾರ್ಡ್ ಸಿ ಸುರೇಶ್ ರೈನಾ ಬಿ ಡ್ವೇನ್ ಬ್ರಾವೊ  16

ಹರಭಜನ್ ಸಿಂಗ್ ಸಿ ಸುರೇಶ್ ರೈನಾ ಬಿ ಬೆನ್ ಹಿಲ್ಫೆನ್ಹಾಸ್  01

ಲಸಿತ್ ಮಾಲಿಂಗ ಬಿ ರವೀಂದ್ರ ಜಡೇಜಾ  17

ಧವಳ್ ಕುಲಕರ್ಣಿ ಔಟಾಗದೆ  10

ಆರ್.ಪಿ.ಸಿಂಗ್ ಔಟಾಗದೆ  01

ಇತರೆ:  (ಲೆಗ್‌ಬೈ-5, ವೈಡ್-5, ನೋಬಾಲ್-1) 11

ವಿಕೆಟ್ ಪತನ: 1-47 (ಸಚಿನ್; 4.6); 2-55 (ಸ್ಮಿತ್; 6.2); 3-68   (ಕಾರ್ತಿಕ್; 8.1); 4-77 (ರೋಹಿತ್; 10.1); 5-96 (ರಾಯುಡು; 11.5); 6-102 (ಫ್ರಾಂಕ್ಲಿನ್; 13.3); 7-103 (ಹರಭಜನ್; 14.2); 8-129 (ಪೊಲಾರ್ಡ್; 17.6); 9-148 (ಮಾಲಿಂಗ; 19.4)

ಬೌಲಿಂಗ್: ಶಾದಾಬ್ ಜಕಾತಿ 4-0-25-1 (ವೈಡ್-1), ಬೆನ್ ಹಿಲ್ಫೆನ್ಹಾಸ್ 4-0-45-1 (ನೋಬಾಲ್-1, ವೈಡ್-4), ಆರ್.ಅಶ್ವಿನ್ 3-0-18-1, ರವೀಂದ್ರ ಜಡೇಜಾ 2-0-15-1, ಅಲ್ಬಿ ಮಾರ್ಕೆಲ್ 4-0-31-2, ಡ್ವೇನ್ ಬ್ರಾವೊ 3-0-10-2

ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 38 ರನ್‌ಗಳ ಜಯ ಹಾಗೂ ಎರಡನೇ ಅರ್ಹತಾ ಪಂದ್ಯದಲ್ಲಿ ಆಡಲು ಅವಕಾಶ. ಪಂದ್ಯ ಶ್ರೇಷ್ಠ: ಎಂ.ಎಸ್.ದೋನಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry