ಪಂದ್ಯಗಳು ಬೇಗ ಆರಂಭ

7
ಭಾರತ- ಇಂಗ್ಲೆಂಡ್ ಏಕದಿನ ಸರಣಿ

ಪಂದ್ಯಗಳು ಬೇಗ ಆರಂಭ

Published:
Updated:

ನವದೆಹಲಿ (ಪಿಟಿಐ): ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಮುಂದಿನ ತಿಂಗಳು ನಡೆಯುವ ಏಕದಿನ ಕ್ರಿಕೆಟ್ ಸರಣಿಯ ಮೊದಲ ನಾಲ್ಕು ಪಂದ್ಯಗಳು ಮಧ್ಯಾಹ್ನ 12.00 ಗಂಟೆಗೆ ಆರಂಭವಾಗಲಿವೆ.ಹಗಲು ರಾತ್ರಿ ಪಂದ್ಯಗಳು ಮಧ್ಯಾಹ್ನ 2.30ಕ್ಕೆ ಆರಂಭವಾಗುವುದು ವಾಡಿಕೆ. ಆದರೆ ರಾತ್ರಿ ಮಂಜು ಬೀಳುವುದರಿಂದ ಆಟದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಂದ್ಯಗಳನ್ನು ಎರಡೂವರೆ ಗಂಟೆ ಮುಂಚಿತವಾಗಿ ಆರಂಭಿಸಲು ನಿರ್ಧರಿಸಿದೆ.ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ಜನವರಿ 11 ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಈ ಪಂದ್ಯವಲ್ಲದೆ, ಕೊಚ್ಚಿ, ರಾಂಚಿ ಮತ್ತು ಮೊಹಾಲಿಯಲ್ಲಿ ನಡೆಯುವ ಪಂದ್ಯಗಳೂ ಮಧ್ಯಾಹ್ನ 12.00ಕ್ಕೆ ಆರಂಭವಾಗಲಿವೆ. ಧರ್ಮಶಾಲಾದಲ್ಲಿ ನಡೆಯುವ ಕೊನೆಯ ಏಕದಿನ ಈ ಬೆಳಿಗ್ಗೆ 9.00ಕ್ಕೆ ಆರಂಭವಾಗಲಿದೆ.

`ಹೊನಲು ಬೆಳಕಿನಲ್ಲಿ ನಡೆಯುವ ಪಂದ್ಯಗಳ ಸಮಯವನ್ನು ಪರಿಷ್ಕರಿಸಲಾಗಿದೆ. ಎರಡೂ ತಂಡಗಳು ಉತ್ತಮ ಪರಿಸ್ಥಿತಿಯಲ್ಲಿ ಆಡುವಂತಾಗಲು ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry