ಸೋಮವಾರ, ಮೇ 17, 2021
28 °C

ಪಂದ್ಯದ ಮಧ್ಯದಲ್ಲಿ ಆತಂಕ ಎದುರಿಸಿದೆವು: ಮೆಕ್ಲಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಡಿಫ್ (ಪಿಟಿಐ): `ಶ್ರೀಲಂಕಾ ವಿರುದ್ಧದ ಪಂದ್ಯದ ಮಧ್ಯದಲ್ಲಿ ಆತಂಕ ಎದುರಿಸಿದೆವು. ಆದರೆ, ಸಿಂಹಳೀಯರು ನೀಡಿದ ಅಲ್ಪ ಮೊತ್ತದ ಗುರಿ ತಲುಪುವ ವಿಶ್ವಾಸ ಇತ್ತು' ಎಂದು ನ್ಯೂಜಿಲೆಂಡ್ ತಂಡದ ನಾಯಕ ಬ್ರೆಂಡನ್ ಮೆಕ್ಲಮ್ ಅಭಿಪ್ರಾಯಪಟ್ಟಿದ್ದಾರೆ.`ಲಂಕಾ ಪಡೆ ಯಾವಾಗಲೂ ಅಪಾಯಕಾರಿ. ಪಂದ್ಯದ ಮಧ್ಯದಲ್ಲಿ ನಾವು ಸ್ವಲ್ಪ ಆತಂಕಗೊಂಡಿದ್ದೆವು. ಗುರಿ ಮುಟ್ಟುವುದು ಮಹತ್ವವಾಗಿತ್ತು. ಇಂತಹ ಪರಿಸ್ಥಿತಿಗಳನ್ನು ಎದುರಿಸಿದ ಸಾಕಷ್ಟು ಅನುಭವವಿತ್ತು. ಆದರೂ ಗುರಿ ಮುಟ್ಟಲು ಕಷ್ಟ ಎನಿಸಿತು' ಎಂದು ಪಂದ್ಯದ ಬಳಿಕ ಮೆಕ್ಲಮ್ ನುಡಿದಿದ್ದಾರೆ.ಸೊಫಿಯಾ ಕ್ರೀಡಾಂಗಣದಲ್ಲಿ ಲಂಕಾ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಕಿವೀಸ್ ಒಂದು ವಿಕೆಟ್ ಗೆಲುವು ಪಡೆದಿದೆ.`ಶ್ರೀಲಂಕಾ ತಂಡದಲ್ಲಿ ಅತ್ಯುತ್ತಮ ಶ್ರೇಣಿಯ ಬೌಲರ್‌ಗಳಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಚೆಂಡು ನಿಧಾನವಾಗ ತೊಡಗಿತ್ತು. ಸುಲಭವಾಗಿ ಬ್ಯಾಟ್‌ನತ್ತ ಬರುತ್ತಿರಲಿಲ್ಲ. ಆದರೂ ಒಟ್ಟಾರೆಯಾಗಿ ಚೆನ್ನಾಗಿ ಆಡಿದೆವು. ಬೌಲರ್‌ಗಳ ಉತ್ತಮ ಪ್ರದರ್ಶನವೇ ಗೆಲುವಿಗೆ ಕಾರಣ' ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.