ಪಂಪ್‌ಹೌಸ್‌ನಲ್ಲಿ ನಾಯಿ ಶವ ಪತ್ತೆ!

7

ಪಂಪ್‌ಹೌಸ್‌ನಲ್ಲಿ ನಾಯಿ ಶವ ಪತ್ತೆ!

Published:
Updated:
ಪಂಪ್‌ಹೌಸ್‌ನಲ್ಲಿ ನಾಯಿ ಶವ ಪತ್ತೆ!

ಮಂಡ್ಯ: ನಗರದ ವಿವಿಧ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸುವ ಪ್ರಮುಖ ಸಂಗ್ರಹಗಾರ ಶಂಕರನಗರದ ಪಂಪ್‌ಹೌಸ್‌ನಲ್ಲಿ ನಾಯಿಯ ಕೊಳೆತ ಮೃತದೇಹ ಬುಧವಾರ ಪತ್ತೆಯಾಗಿದೆ. ನಾಯಿ ಸತ್ತು ನಾಲ್ಕೈದು ದಿನಗಳೇ ಆಗಿವೆ ಎಂದು ಶಂಕಿಸಲಾಗಿದೆ.ನಾಯಿ ಸತ್ತು ಬಿದ್ದಿರುವ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿದ ನಗರಸಭೆ ಅಧ್ಯಕ್ಷರು ಮತ್ತು ಇತರ ಸದಸ್ಯರು ಅದನ್ನು ಹೊರಗೆ ತೆಗೆಸಿದರು. ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದ ನಾಯಿ ದೇಹವನ್ನು ಪಂಪ್‌ಹೌಸ್ ಆವರಣದಲ್ಲೇ ಮಣ್ಣು ಮಾಡಲಾಯಿತು. ಆದರೆ, ಈ ಘಟನೆ ನಾಗರಿಕರಲ್ಲಿ ಬೇಸರ ಮೂಡಿಸಿದ್ದು, ಸ್ಥಳದಲ್ಲಿ ಸೇರಿದ್ದ ಕೆಲವು ಸಾರ್ವಜನಿಕರು ನೀರಿನ ನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಈಗಾಗಲೇ ಒಳಜಗಳ, ಆಂತರಿಕ ಭಿನ್ನಮತದಿಂದ ಬಳಲುತ್ತಿರುವ ಜೆಡಿಎಸ್ ಆಡಳಿತದಲ್ಲಿರುವ ನಗರಸಭೆಯ ಕಾರ್ಯವೈಖರಿಗೆ ಕನ್ನಡಿ ಹಿಡಿಯುವಂತೆ ಈ ಘಟನೆ ಬೆಳಕಿಗೆ ಬಂದಿದೆ.ಆದರೆ, ಈ ನಾಯಿ ಶವ ಹೇಗೆ ಬಂದಿತು. ಬೇರೆಡೆ ಸತ್ತು ಹರಿವ ನೀರಿನೊಂದಿಗೆ ಬಂದಿರಬಹುದೇ ಎಂಬ ಬಗ್ಗೆ ಪಂಪ್‌ಹೌಸ್ ಸಿಬ್ಬಂದಿಗೆ ಖಾತರಿ ಇರಲಿಲ್ಲ. ಮಂಗಳವಾರ ಬೆಳಿಗ್ಗೆ ಗಮನಿಸಿದಾಗ ಶವ ಕಂಡುಬಂದಿರಲಿಲ್ಲ. ಇಂದು ಪತ್ತೆಯಾಗಿದೆ. ಹೇಗೆ ಬಂತೋ ಗೊತ್ತಿಲ್ಲ ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿದರು.ಪಂಪ್‌ಹೌಸ್ ಮೂರು ಲಕ್ಷ ರೂಪಾಯಿ ಎಂಎಲ್‌ಡಿ ಸಾಮರ್ಥ್ಯದ ಸಂಗ್ರಹಾಗಾರದಲ್ಲಿ ನಾಯಿಯ ಶವ ಕಂಡುಬಂದಿತು. ಇಲ್ಲಿಗೆ ನೀರನ್ನು ಕಾಲುವೆಯಿಂದ ತೆಗೆದುಕೊಳ್ಳುತ್ತಿದ್ದು. ಬಹುಶಃ ಕಾಲುವೆಯಲ್ಲಿ ಹರಿದು ಬರುವ ನೀರಿನೊಂದಿಗೆ ನಾಯಿಯ ಶವ ಬಂದಿರಬಹುದು ಎಂದು ಅಧ್ಯಕ್ಷ ಎಂ.ಪಿ. ಅರುಣ್‌ಕುಮಾರ್ ಅಭಿಪ್ರಾಯಪಟ್ಟರು.

 

ಸ್ವಚ್ಛತೆಗೆ ಕ್ರಮ: ನಾಯಿ ಸತ್ತಿರುವ ವಿಷಯ ತಿಳಿದ ಕೂಡಲೇ ಅದನ್ನು ತೆಗೆಸಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ನೀರನ್ನು ಪೂರ್ತಿ ಖಾಲಿ ಮಾಡಿ, ನಿರ್ದಿಷ್ಟ ಸಂಗ್ರಹಗಾರವನ್ನು ಸ್ವಚ್ಛಗೊಳಿಸಿದ ಬಳಿಕವೇ ಹೊಸದಾಗಿ ನೀರು ತುಂಬಿಸಲು ಸೂಚಿಸ ಲಾಗಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಜಿ.ಸಿ. ನಾಗರಾಜು ಮತ್ತು ಇತರ ಸದಸ್ಯರೂ ಪಂಪ್ ಹೌಸ್‌ಗೆ ಭೇಟಿ ನೀಡಿದವರಲ್ಲಿ ಸೇರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry