ಶುಕ್ರವಾರ, ಜೂನ್ 18, 2021
25 °C

ಪಂಪ್ ಅಪರೇಟರ್ ಮರು ನೇಮಕಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಲ ಮಂಡಳಿಯು ಈ ಮೊದಲು ಪಾಲಿಕೆಯಲ್ಲಿ ನೀರು ನಿರ್ವಹಣೆ ಕೆಲಸ ಮಾಡುತ್ತಿದ್ದ 200 ಜನ ಅಪರೇಟರ್‌ಗಳಲ್ಲಿ 56 ಜನರನ್ನು ನೇಮಕ ಮಾಡಿಕೊಂಡು ಇನ್ನುಳಿದ ಪಂಪ್ ಅಪರೇಟರ್‌ಗಳನ್ನು ತೆಗೆದು ಹಾಕಲಾಗಿದೆ ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಚಿನ್ ಎಸ್. ಫರಹತಾಬಾದ್ ಆರೋಪಿಸಿದರು.ಮಹಾನಗರ ಪಾಲಿಕೆಯಿಂದ ನೀರು ನಿರ್ವಾಹಣೆ ಕೆಲಸವನ್ನು ಸರ್ಕಾರ ಈಚೆಗೆ ಜಲ ಮಂಡಳಿಗೆ ವಹಿಸಿದ ನಂತರ ಜಲಮಂಡಳಿಯು ಪಂಪ್ ಅಪರೇಟರ್‌ಗಳನ್ನು ಕೆಲಸದಿಂದ ತೆಗೆದು ಅನ್ಯಾಯ ಮಾಡುತ್ತಿದೆ. ಇದನ್ನು ಕೂಡಲೆ ಪರಿಹರಿಸಿ ಅವರಿಗೆ ನ್ಯಾಯ ನೀಡುವಂತೆ ಆಗ್ರಹಿಸಿ ಸೋಮವಾರ ಜೈ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಹತ್ತು ವರ್ಷಗಳಿಂದ ಪ್ರಾಮಾಣಿಕರಾಗಿ ಕಾರ್ಯನಿರ್ವಹಿಸುತ್ತಿರುವ ಪಂಪ್ ಅಪರೇಟರ್‌ಗಳನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವಂತೆ ಜಲ ಮಂಡಳಿಯ ಮುಖ್ಯಸ್ಥ ಬಾಲಚಂದ್ರ ಅರಸ ಅವರಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು. ಈ ಸಮಸ್ಯೆಯನ್ನು ಪರಿಹರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ವೇದಿಕೆಯ ಪದಾಧಿಕಾರಿಗಳು ಎಚ್ಚರಿಸಿದರು.ಜಗನ್ನಾಥ ಪಟ್ಟಣಶೆಟ್ಟಿ, ಸತೀಶ ಫರಹತಾಬಾದ್, ಸಂದೇಶ ಪವಾರ, ಅಶೋಕ, ಶರಣು ಮಡಿವಾಳ, ಬಾಲರಾಜ, ಶ್ರಿಕಾಂತ ಜಾಧವ, ಉದಯಕುಮಾರ,  ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.