ಬುಧವಾರ, ಜೂನ್ 23, 2021
30 °C

ಪಕ್ಷಕ್ಕೆ ಅಭೂತಪೂರ್ವ ಬೆಂಬಲ: ಜೆಡಿಎಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ:  `ಕರಾವಳಿಯಲ್ಲಿ ಜೆಡಿಎಸ್‌ಗೆ ನೆಲೆಯಿಲ್ಲ ಎಂಬ ಅಭಿಪ್ರಾಯ ಇದ್ದರೂ, ಚುನಾವಣಾ ಕಣಕ್ಕಿಳಿದಿದ್ದ ನಮಗೆ 15 ದಿನಗಳಲ್ಲಿ ಮತದಾರರೊಂದಿಗಿನ ಓಡಾಟ, ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅಭೂತಪೂರ್ವ ಬೆಂಬಲವೂ ಸಿಕ್ಕಿದೆ~ ಎಂದು ಜೆಡಿಎಸ್ ಯುವ ಘಟಕ ಅಧ್ಯಕ್ಷ ಮಧು ಬಂಗಾರಪ್ಪ ಇಲ್ಲಿ ಹೇಳಿದರು.ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಪ್ರತಿಕ್ರಿಯೆ ಮುಂದಿನ ವಿಧಾನಸಭಾ ಚುನಾವಣೆಗೂ ನೆರವಾಗಲಿದೆ ಎಂದರು.ಕುಟುಂಬದ ಬಗ್ಗೆ ಬರೆಯದಿರಿ: `ಜನ ಹೋದಲ್ಲಿ ಬಂದಲ್ಲಿ ಕೇಳುತ್ತಾರೆ, ಅಣ್ಣತಮ್ಮನ ಜಗಳದ ಬಗ್ಗೆ, ನೀವಿಬ್ಬರು ಒಂದಾಗಿಬಿಡಿ ಎನ್ನುತ್ತಾರೆ. ಆದರೆ ಬಂಗಾರಪ್ಪ ಬದುಕಿದ್ದಾಗಲೇ ನಮ್ಮ ಅಣ್ಣ ಸರಿಹೋಗಲಿಲ್ಲ, ಈಗ ಅವರು ಸರಿಹೋಗುತ್ತಾರೆ ಎಂದರೆ ಆ ದೇವರೇ ಬುದ್ಧಿ ಕೊಡಬೇಕಷ್ಟೇ~ ಎಂದು ಹೇಳಿದ ಮಧುಬಂಗಾರಪ್ಪ, ನಾವು ಕುಟುಂಬ ರಾಜಕಾರಣ ಮಾಡುತ್ತಿಲ್ಲ ಅಥವಾ ಜಾತಿ ರಾಜಕಾರಣವನ್ನೂ ಮಾಡುತ್ತಿಲ್ಲ. ಬಂಗಾರಪ್ಪನವರು ಈ ನಾಡಿನ ಆಸ್ತಿ, ದಯವಿಟ್ಟು ನಮ್ಮ ಕುಟುಂಬದ ಬಗ್ಗೆ ಬರೆಯದಿರಿ, ಹಿಂದಿನ ಘಟನೆ ನಾವು ಮರೆತಿದ್ದೇವೆ ಎಂದು ಮಾಧ್ಯಮಗಳಿಗೆ ಅವರು ಮನವಿ ಮಾಡಿಕೊಂಡರು.ಏ.22ರಂದು ಸಮಾವೇಶ: ದಾವಣಗೆರೆಯಲ್ಲಿ  ಯುವ ಜನತಾದಳದ ರಾಜ್ಯಮಟ್ಟದ ಸಮಾವೇಶ, ಶಕ್ತಿ ಪ್ರದರ್ಶನವನ್ನು ಏ.22ರಂದು ಹಮ್ಮಿಕೊಳ್ಳಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಮಧು ಬಂಗಾರಪ್ಪ, ಸುಮಾರು 1 ಲಕ್ಷ ಯುವಕರನ್ನು ಅಲ್ಲಿ ಒಂದೆಡೆ ಸೇರಿಸುವ ಉದ್ದೇಶವಿದೆ ಎಂದರು.ಬಂಗಾರಪ್ಪ ಅವರು ದಾವಣಗೆರೆಯನ್ನು ಶಕ್ತಿ ಪ್ರದರ್ಶನದ ವೇದಿಕೆಯಾಗಿ ಈ ಹಿಂದೆಯೂ ಬಳಸಿಕೊಂಡಿದ್ದರು. ಹೀಗಾಗಿ ತಾವು ಕೂಡ ಅಲ್ಲಿಂದಲೇ ಜೆಡಿಎಸ್ ಯುವ ಘಟಕದ ಸಮಾವೇಶ ನಡೆಸಲಿರುವುದಾಗಿ ಅವರು ಹೇಳಿದರು.ಮಾಜಿ ಶಾಸಕ ಯು.ಆರ್.ಸಭಾಪತಿ ಮಾತನಾಡಿ, ಮುಂದಿನ ವಿಧಾನಸಭೆ ಚುನಾವಣೆಗೆ ಇಲ್ಲಿಂದಲೇ ಸ್ಪರ್ಧಿಸಲು ಶಕ್ತಿ ತುಂಬುವಷ್ಟು ಈಗಿನ ಚುನಾವಣಾ ಪ್ರಚಾರ ನಮಗೆ ಉತ್ಸಾಹವನ್ನು ತಂದಿದೆ, ಹಳೆ ತಲೆ ಮಾರಿಗಿಂತ ಹೊಸ ತಲೆ ಮಾರಿನವರು ನಮಗೆ ಉತ್ಸಾಹ ತುಂಬಿದ್ದಾರೆ ಎಂದರು. ಜೆಡಿಎಸ್‌ಜಿಲ್ಲಾ ಘಟಕ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಗುಲಾಂ ಅಹಮ್ಮದ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.