ಶುಕ್ರವಾರ, ಜೂನ್ 25, 2021
21 °C

ಪಕ್ಷಗಳಿಗೆ ದೇಣಿಗೆಗೆ 14 ಟ್ರಸ್ಟ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಾಜಕೀಯ ಪಕ್ಷಗಳಿಗೆ ಚುನಾವಣಾ ನಿಧಿ ಪೂರೈಸಲು ಟಾಟಾ, ರಿಲಯನ್ಸ್‌, ಮಹಿಂದ್ರಾ, ಬಜಾಜ್‌ ಸೇರಿ ಹಲವು ಉದ್ಯಮ ಸಂಸ್ಥೆಗಳು ಕನಿಷ್ಠ 14 ‘ಚುನಾವಣಾ ಟ್ರಸ್ಟ್‌’ಗಳನ್ನು ರಚಿಸಿವೆ. ಹೊಸ ನೀತಿಯ ಪ್ರಕಾರ, ರಾಜಕೀಯ ಪಕ್ಷಗಳಿಗೆ ಚುನಾವಣಾ ನಿಧಿ ಒದಗಿಸುವವರು ‘ಚುನಾವಣಾ ಟ್ರಸ್ಟ್‌’ ನೋಂದಾಯಿಸುವುದು ಕಡ್ಡಾಯ.ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದಿಂದ ದೊರೆತ ಮಾಹಿತಿ ಪ್ರಕಾರ, ಈಗಾಗಲೇ ಇಂತಹ 14 ಟ್ರಸ್ಟ್‌ಗಳ ನೋಂದಣಿಯಾಗಿದ್ದು ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಗಳಿವೆ. ಇವುಗಳಲ್ಲಿ ಕೆಲವು ಟ್ರಸ್ಟ್‌ಗಳು ಚುನಾವಣೆ ನಂತರ ಪಕ್ಷಗಳಿಗೆ ನಿಧಿ ಒದಗಿಸಲು ನಿರ್ಧರಿಸಿದ್ದರೆ, ಇನ್ನು ಕೆಲವು ಟ್ರಸ್ಟ್‌ಗಳು ಚುನಾವಣೆಗೆ ಮೊದಲೇ ಹಣ ಪೂರೈಸಲು ಮುಂದಾಗಿವೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.