ಗುರುವಾರ , ನವೆಂಬರ್ 14, 2019
18 °C

`ಪಕ್ಷದಲ್ಲಿ ಸರ್ವಾಧಿಕಾರ ಇಲ್ಲ -ಮೊಯಿಲಿ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಅಭ್ಯರ್ಥಿ ಪ್ರಕಟಿಸದಿರುವ ಕುರಿತು ಬಿಜೆಪಿ ಮುಖಂಡರು ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಮೊಯಿಲಿ, `ನಮ್ಮ ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆ ಇಲ್ಲ. ಆಂತರಿಕ ಪ್ರಜಾಪ್ರಭುತ್ವ ಇದೆ. ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತೇವೆ. ಸರ್ವಾಧಿಕಾರದಿಂದ ಹೆಸರು ಪ್ರಕಟಿಸುವುದಿಲ್ಲ' ಎಂದು ಹೇಳಿದ್ದಾರೆ.ಕಾಂಗ್ರೆಸ್ ಸಭೆಗಳು ಶ್ರದ್ಧಾಂಜಲಿ ಸಭೆಗಳಾಗುತ್ತವೆ ಎಂಬ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, `ಸುಷ್ಮಾ ಅವರಂತಹ ಹಿರಿಯ ನಾಯಕರು ಈ ರೀತಿ ಮಾತನಾಡಬಾರದು. ಅವರಿಗೆ ಭಾಷೆಯ ಮೇಲೆ ಹಿಡಿತ ಇರಬೇಕು' ಎಂದು ಸಲಹೆ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)