ಪಕ್ಷಪಾತ ಮಾಡುತ್ತಿರುವ ಐಒಎ: ಐಎಚ್‌ಎಫ್

7

ಪಕ್ಷಪಾತ ಮಾಡುತ್ತಿರುವ ಐಒಎ: ಐಎಚ್‌ಎಫ್

Published:
Updated:

ನವದೆಹಲಿ (ಪಿಟಿಐ): ದೇಶದಲ್ಲಿ ಹಾಕಿ ಆಡಳಿತ ನಡೆಸುವುದಕ್ಕೆ ತನಗೆ ಸಮನಾದ ಅವಕಾಶ ನೀಡದಿರುವ ಮೂಲಕ ಭಾರತ ಒಲಿಂಪಿಕ್ ಸಂಸ್ಥೆ(ಐಒಎ)ಯು ಪಕ್ಷಪಾತ ಮಾಡುತ್ತಿದೆ ಎಂದು ಭಾರತ ಹಾಕಿ ಫೆಡರೇಷನ್ (ಐಎಚ್‌ಎಫ್) ದೂರಿದೆ.ಹಾಕಿ ಇಂಡಿಯಾ(ಎಚ್‌ಐ)ಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಐಎಚ್‌ಎಫ್ ಅನ್ನು ಮೂಲೆಗುಂಪು ಮಾಡಲು ಐಒಎ ಆಡಳಿತದ ಚುಕ್ಕಾಣಿ ಹಿಡಿದವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾದ್ದಾರೆ ಐಎಚ್‌ಎಫ್ ಪ್ರಧಾನ ಕಾರ್ಯದರ್ಶಿ ಅಶೋಕ್ ಮಾಥುರ್.`ನ್ಯಾಯಾಲಯದ ಆದೇಶದಂತೆ ಐಎಚ್‌ಎಫ್ ಕೂಡ ದೇಶದಲ್ಲಿ ಹಾಕಿ ಆಡಳಿತ ನಡೆಸಲು ಮಾನ್ಯತೆ ಹೊಂದಿದೆ. ಆದರೆ ಐಒಎ ಹಸ್ತಕ್ಷೇಪ ಮಾಡುತ್ತಿದೆ~ ಎಂದು ಟೀಕಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry