ಪಕ್ಷಭೇದ ಮರೆತು ಗಲ್ಲು ಶಿಕ್ಷೆಗೆ ಒತ್ತಾಯ

7

ಪಕ್ಷಭೇದ ಮರೆತು ಗಲ್ಲು ಶಿಕ್ಷೆಗೆ ಒತ್ತಾಯ

Published:
Updated:

ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು ಎಂದು ರಾಜಕೀಯ ಪಕ್ಷಗಳು ಪಕ್ಷಭೇದವಿಲ್ಲದೆ ಒತ್ತಾಯಿಸಿವೆ. ಹಾಗೆಯೇ ವಿವಿಧ ಕ್ಷೇತ್ರಗಳ ಪ್ರಮುಖರು ಇಂತಹದ್ದೇ ಆಗ್ರಹವನ್ನು ಮಾಡಿದ್ದಾರೆ.

***

ಕೋರ್ಟ್‌ ತೀರ್ಪು ಸ್ವಾಗತಾರ್ಹ. ನಾಲ್ವರನ್ನು ನೇಣಿಗೆ ಹಾಕಬೇಕು. ಅವರು ನಮ್ಮ ಕಾಲೊನಿಗೆ ಕಪ್ಪುಚುಕ್ಕೆ ಆಗಿದ್ದರು

–ನಾಲ್ವರು ಅಪರಾಧಿಗಳ ವಾಸಿಸುತ್ತಿದ್ದ ದೆಹಲಿಯ ಆರ್‌.ಕೆ. ಪುರಂನ ರವಿದಾಸ್‌ ಕ್ಯಾಂಪ್‌ನ ನೆರೆಹೊರೆಯ ಮಹಿಳೆಯರು

***

ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸುವುದರ ಮೂಲಕ ಇಂತಹ ಹೀನ ಕೃತ್ಯವನ್ನು ಮುಂದೆ ಯಾರೂ ಮಾಡದಂತಹ ಎಚ್ಚರಿಕೆಯನ್ನು  ರವಾನಿಸಬೇಕು

–ಸುಷ್ಮಾ ಸ್ವರಾಜ್‌, ಬಿಜೆಪಿ ನಾಯಕಿ

***

ಇಂತಹ ಹೇಯ ಕೃತ್ಯ ಮತ್ತೆ ಘಟಿಸಬಾರದು. ಅಂತಹ ಶಿಕ್ಷೆಯನ್ನು ಕೋರ್ಟ್‌ ವಿಧಿಸಬೇಕು

–ಅಂಬಿಕಾ ಸೋನಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

***

ವಿಚಾರಣೆ ಹಂತದಲ್ಲಿರುವ ಸಾವಿರಾರು ಅತ್ಯಾಚಾರ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸಬೇಕು. ಪ್ರಬಲ ಸಾಕ್ಷಾ್ಯಧಾರ ಇದ್ದ ಈ ಪ್ರಕರಣದ ತೀರ್ಪು ಹೊರಬರಲು ಒಂಬತ್ತು ತಿಂಗಳು ಹಿಡಿಯಿತು ಎಂದರೆ, ಲೈಂಗಿಕ ದೌರ್ಜನ್ಯ ಒಳಗಾದ ಮಕ್ಕಳು ಮತ್ತು ಮಹಿಳೆಯರು ನ್ಯಾಯಕ್ಕಾಗಿ ಇನ್ನೆಷ್ಟು ದಿನ ಕಾಯಬೇಕು

–ಬೃಂದಾ ಕಾರಟ್‌, ಸಿಪಿಎಂ ನಾಯಕಿ

***

ಈ ಘಟನೆಯಿಂದ ದೆಹಲಿ ಮಾತ್ರವಲ್ಲ ಇಡೀ ದೇಶವೇ ಆತಂಕಗೊಂಡಿತ್ತು. ನಾವು ತ್ವರಿತ ಗತಿ ನ್ಯಾಯಾಲಯವನ್ನು ಈ ಪ್ರಕರಣದ ವಿಚಾರಣೆಗಾಗಿ ರಚಿಸಿದೆವು. ಕೋರ್ಟ್‌ ತನ್ನ ಕೆಲಸ ಮಾಡಿದೆ. ಶಿಕ್ಷೆಯ ಪ್ರಮಾಣ ಪ್ರಕಟಿಸುವುದಷ್ಟೆ ಬಾಕಿ ಇದೆ

–ಶೀಲಾ ದೀಕ್ಷಿತ್‌, ದೆಹಲಿ ಮುಖ್ಯಮಂತ್ರಿ

***

ಇದು ಕೂಡ ವಿರಾಳಾತಿವಿರಳ ಪ್ರಕರಣವಾಗಿರುವ ಕಾರಣ ಗರಿಷ್ಠ ಶಿಕ್ಷೆ ವಿಧಿಸುವುದೇ ಸೂಕ್ತ

–ಕಿರಣ್‌ ಬೇಡಿ, ನಿವೃತ್ತ ಐಪಿಎಸ್‌ ಅಧಿಕಾರಿ

***

ಅತ್ಯಾಚಾರ ಪ್ರಕರಣಗಳನ್ನು ತಡೆಯಲು ನಾವು ಹಲವು ಕಾನೂನಿಗಳಿಗೆ ತಿದ್ದುಪಡಿ ತಂದು  ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಆಗುವಂತಹ ಅವಕಾಶ ಕಲ್ಪಿಸಿದ್ದೇವೆ

–ಸುಶೀಲ್‌ ಕುಮಾರ್‌, ಗೃಹ ಸಚಿವ

***

ಈ ಪ್ರಕರಣದ ತಪ್ಪಿತಸ್ಥರು ನೇಣಿಗೆ ಹಾಕಲು ಅರ್ಹರು

–ಆರ್‌.ಕೆ. ಸಿಂಗ್‌, ನಿವೃತ್ತ ಗೃಹ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry