ಪಕ್ಷಿಗಳಂತೆ ನಾವೂ ಹಾರಬಹುದೆ?
ರೆಕ್ಕೆ ಬಡಿದು, ನೀಲಾಕಾಶದಲ್ಲಿ ತೇಲುತ್ತಾ ನಾವೂ ಪಕ್ಷಿಗಳಂತೆ ಹಾರಬಹುದೆ? ಸಾಧ್ಯವಾಗದು. ಕೃತಕ ರೆಕ್ಕೆ ಅಂಟಿಸಿಕೊಂಡರೂ ನಾವು ಹಾರಲಾರೆವು. ಯಾಕೆಂದರೆ ಹಕ್ಕಿಗಳ ಮೈಕಟ್ಟು ಬಹಳ ಹಗುರ. ಅವುಗಳ ಮೂಳೆ ಕೂಡ ಹಗುರ. ಇವುಗಳೊಂದಿಗೆ ಅವುಗಳ ದೇಹದಲ್ಲಿ ಇರುವ ಗಾಳಿ ಚೀಲಗಳೂ ಅವುಗಳ ಹಾರುವಿಕೆಗೆ ಸಹಾಯ ಮಾಡುತ್ತವೆ.
ಬಾನಾಡಿಗಳ ದೇಹದ ತೂಕಕ್ಕೆ ಹೋಲಿಸಿದರೆ ಅವುಗಳ ಸ್ನಾಯುಗಳು ತುಂಬಾ ಬಲವಾಗಿರುತ್ತವೆ. ಆ ಸ್ನಾಯುಗಳ ಬಲದಿಂದ ಹಕ್ಕಿಗಳು ರೆಕ್ಕೆ ಬಡಿದು ಹಾರುತ್ತವೆ. ಗಾಳಿಯನ್ನು ಕೆಳಮುಖವಾಗಿ ತಳ್ಳುತ್ತಾ ಮೇಲೆ ಮೇಲೆ ಏರುತ್ತವೆ. ನಮ್ಮ ದೇಹ ತುಂಬಾ ಭಾರ. ನಮ್ಮ ಸ್ನಾಯುಗಳು ಹಕ್ಕಿಗಳಷ್ಟು ಬಲವಾಗಿಲ್ಲ. ಜೊತೆಗೆ ಗಾಳಿಚೀಲಗಳು ಇಲ್ಲದ ಕಾರಣ ನಮಗೆ ಕೃತಕ ರೆಕ್ಕೆ ಬಡಿಯಲೂ ಕಷ್ಟ.
ಸಣ್ಣ ಹಕ್ಕಿಗಳು ದೊಡ್ಡ ಹಕ್ಕಿಗಳಿಗಿಂತ ವೇಗವಾಗಿ ಹಾರುತ್ತವೆ. ಹಾಗೆಯೇ ಹದ್ದು, ಗಿಡುಗ ಹಕ್ಕಿಗಳಿಗೆ ದೇಹದ ತೂಕಕ್ಕೆ ಪೂರಕವಾದ ಸ್ನಾಯು ಬಲ ಇರುವುದರಿಂದ ಅವು ಪುಟ್ಟ ಹಕ್ಕಿಗಿಂತಲೂ ವೇಗವಾಗಿ ಹಾರಬಲ್ಲವು. ನವಿಲು, ಹುಂಜಗಳು ಹೆಚ್ಚು ಎತ್ತರಕ್ಕೆ ಹಾರಲಾರವು. ಅತಿ ತೂಕದ ಉಷ್ಟ್ರಪಕ್ಷಿ ಮತ್ತು ಪೆಂಗ್ವಿನ್ ಮುಂತಾದವು ಹಾರಲಾಗದ ಪಕ್ಷಿಗಳು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.