ಗುರುವಾರ , ಜೂನ್ 17, 2021
26 °C

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ: ಚಿನ್ನಯ್ಯ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ರಾಯಚೂರು ಲೋಕ­ಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿ­ಯಾಗಿ  ಸ್ಪರ್ಧಿಸುತ್ತಿರುವುದಾಗಿ ರಾಯ­ಚೂರು ಜಿಲ್ಲಾ ಹತ್ತಿ ಬೆಳೆ­ಗಾರರ ರೈತರ ಹೋರಾಟ ಸಮಿತಿ ಅಧ್ಯಕ್ಷ ಚಿನ್ನಯ್ಯ ನಾಯಕ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ಲೋಕ­ಸಭಾ ಕ್ಷೇತ್ರ ಹಿಂದುಳಿದ ಕ್ಷೇತ್ರ. ಪರಿ­ಶಿಷ್ಟ ಪಂಗಡ ಮೀಸಲಾತಿ ಇರುವು­ದರಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಬೇಕು ಎಂದು ಸುತ್ತಮುತ್ತಲಿನ ಗ್ರಾಮದ ಜನತೆ, ರೈತರು, ಬೆಂಬ­ಲಿಗರು ಒತ್ತಾಯ ಮಾಡಿದ್ದಾರೆ. ಹೀಗಾಗಿ ಸ್ಪರ್ಧಿಸುತ್ತಿರುವುದಾಗಿ ಹೇಳಿದರು.ಕೆಲ ಪಕ್ಷಗಳಿಂದ ಸ್ಪರ್ಧಿಸಲು ಆಹ್ವಾನ ಬಂದಿತ್ತು. ಆದರೆ, ಬೆಂಬ­ಲಿಗರು, ರೈತರ ಒತ್ತಾಯದ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸು­ತ್ತಿದ್ದೇನೆ. ಈವರೆಗೆ ಈ ಕ್ಷೇತ್ರದಲ್ಲಿ ಗುರುಗುಂಟ, ಸುರಪುರ, ಅರಕೇರಾ ಈ ಊರಿನವೇ ಸ್ಪರ್ಧಿಸುತ್ತ ಬಂದಿ­ದ್ದಾರೆ ರಾಜಕೀಯ ಪಕ್ಷಗಳೂ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಪರಿಶಿಷ್ಟ ಪಂಗಡದ ಬೇರೆ ವ್ಯಕ್ತಿಗಳು, ಬಡವರು ಈ ಕ್ಷೇತ್ರಕ್ಕೆ ಯಾಕೆ ಸ್ಪರ್ಧಿಸಬಾರದು ಎಂಬ ಪ್ರಶ್ನೆ ತಮ್ಮ ಬೆಂಬಲಿಗರ­ದ್ದಾಗಿದೆ. ಈ ಎಲ್ಲ ಅಂಶಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಮಾಡಿರು­ವುದಾಗಿ ಹೇಳಿದರು.ಚುನಾವಣೆಯಲ್ಲಿ ವ್ಯಾಪಕ ಹಣ, ಅಕ್ರಮವಾಗಿ ಮದ್ಯ ಸರಬರಾಜು ನಡೆಯುತ್ತಿದೆ. ತಮ್ಮ ಅನೇಕ ಬೆಂಬಲಿಗರು ಈ ಬಗ್ಗೆ ವಿಷಯ ತಿಳಿಸುತ್ತಿದ್ದಾರೆ ಎಂದು ಹೇಳಿದರು.ಬಸವರಾಜ ನಾಯಕ, ದಳಪತಿ ಶರಣಪ್ಪಗೌಡ ಪೊಲೀಸ್ ಪಾಟೀಲ,  ಕೆ ನರಸಪ್ಪ ಹಳ್ಳಿಬೆಂಚಿ,  ಪಾಂಡುರಂಗ ಮನ್ಸಲಾಪುರ, ಗೋವಿಂದ ಆಶಾಪುರ, ನಜೀರ ಅಹಮ್ಮದ್, ಪಾಂಡುರಂಗ, ಮಾರೆಪ್ಪ ಶಕ್ತಿನಗರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.