ಮಂಗಳವಾರ, ನವೆಂಬರ್ 19, 2019
26 °C

`ಪಕ್ಷ ಬಯಸಿದರೆ ಸ್ಪರ್ಧೆಗೆ ಸಿದ್ಧ'

Published:
Updated:

ಬೆಳಗಾವಿ: `ಭಾರತೀಯ ಜನತಾ ಪಕ್ಷ ಬಯಸಿದರೆ ಚಿಕ್ಕೋಡಿ- ಸದಲಗಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ' ಎಂದು ಸಂಸದ ಡಾ. ಪ್ರಭಾಕರ ಕೋರೆ ಹೇಳಿದರು.ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, `ಚಿಕ್ಕೋಡಿ- ಸದಲಗಾ ಕ್ಷೇತ್ರಕ್ಕೆ ಬಿಜೆಪಿಯಿಂದ ಈವರೆಗೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ನಾಯಕರು ಸ್ಪರ್ಧಿಸಲು ಸೂಚಿಸಿದರೆ ತಾವು ಕಣಕ್ಕಿಳಿಯುವುದಾಗಿ ತಿಳಿಸಿದರು.`ಬಿಜೆಪಿಯಲ್ಲಿ ಎಲ್ಲ ಜಾತಿ, ವರ್ಗದವರಿಗೆ ಪ್ರಾಧಾನ್ಯತೆ ನೀಡುವ ಮೂಲಕ ಸಾಮಾಜಿಕ ನ್ಯಾಯ ಪಾಲಿಸಲಾಗಿದೆ' ಎಂದರು.ಇದೇ ವೇಳೆ, ಪತ್ರಕರ್ತ ಕಿರಣ ಠಾಕೂರ  ತಮ್ಮ ಜನ್ಮದಿನದಂದು ಬರ ಪರಿಹಾರ ನಿಧಿಗೆ ನೀಡಿದ್ದ ರೂ. 25 ಲಕ್ಷ ಚೆಕ್ಕನ್ನು ಕೋರೆ ಅವರು ಮುಖ್ಯಮಂತ್ರಿ ಶೆಟ್ಟರ್‌ಗೆ ಹಸ್ತಾಂತರಿಸಿದರು.

ಪ್ರತಿಕ್ರಿಯಿಸಿ (+)