ಗುರುವಾರ , ನವೆಂಬರ್ 21, 2019
23 °C

`ಪಕ್ಷ ಬಲವರ್ಧನೆಗೆ ಸಹಕಾರಿ'

Published:
Updated:

ರಾಯಚೂರು: ಮಾಜಿ ಶಾಸಕ ಎ ಪಾಪಾರೆಡ್ಡಿ ಅವರು ಬಿಜೆಪಿ ಪಕ್ಷ ತೊರೆದು ಮರಳಿ ತಮ್ಮ ತವರು ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಗೊಳ್ಳಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ ವಸಂತಕುಮಾರ ಹೇಳಿದರು.ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ಎ ಪಾಪಾರೆಡ್ಡಿ ಹಾಗೂ ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದರು.ಪಾಪಾರೆಡ್ಡಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ. ಈ ಹಿಂದೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ನಗರಸಭೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಎರಡನೇ ಹಂತದ ನಾಯಕರನ್ನು ಸಾಕಷ್ಟು ಬೆಳೆಸಿದ್ದಾರೆ. ಈಗ ಬಿಜೆಪಿ ತೊರೆದು ಮತ್ತೆ ತವರು ಪಕ್ಷಕ್ಕೆ ಆಗಮಿಸಿರುವುದು ಸಂತೋಷ ತಂದಿದೆ ಎಂದರು.ಶಾಸಕ ಸಯ್ಯದ್ ಯಾಸಿನ್ ಹಾಗೂ ಕೆಪಿಸಿಸಿ ಸದಸ್ಯರಾದ ಪಾರಸಮಲ್ ಸುಖಾಣಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಪಾಪಾರೆಡ್ಡಿ ಅವರು ಬಂದಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದರು.ಮಾಜಿ ಸಂಸದ ಎ ವೆಂಕಟೇಶ ನಾಯಕ ಅವರು ಪಕ್ಷದ ಶಾಲು ಹಾಕಿ ಸಿಹಿ ತಿನಿಸಿ ಸ್ವಾಗತಿಸಿದರು. ಜಿ.ಪಂ ಉಪಾಧ್ಯಕ್ಷ ಕೆ ಶರಣಪ್ಪ, ಜಿ ಬಸವರಾಜರೆಡ್ಡಿ, ಜಯವಂತರಾವ್ ಪತಂಗೆ, ಕೆ ಶಾಂತಪ್ಪ, ಜಿ ಶಿವಮೂರ್ತಿ, ತಾಯಣ್ಣ ನಾಯಕ, ಬಿ.ವಿ ನಾಯಕ, ಜಯಣ್ಣ, ಶರಣಪ್ಪ ಮೇಟಿ, ಗೌಸ್ ನವಾಬ್ ಸಾವ್ ಚೌದ್ರಿ, ರವಿ ಬೋಸರಾಜು, ರಸೂಲ್‌ಸಾಬ್, ಜಿಂದಪ್ಪ, ರಾಮಕೃಷ್ಣ ನಾಯಕ, ಜೆ ತಿಮ್ಮಪ್ಪ, ಶಶಿರಾಜ್, ಈಶಪ್ಪ, ಸುಧಾಮ ಸಯ್ಯದ್ ಸೊಹೆಲ್, ಪ್ರಕಾಶ ಕುಲಕರ್ಣಿ, ಕಮಾಂಡರ್ ತಿಮ್ಮಾರೆಡ್ಡಿ, ಶ್ರೀಕಾಂತ ವಕೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಅಮರೇಗೌಡ ಹಂಚಿನಾಳ ಸ್ವಾಗತಿಸಿದರು. ಉಮೇಶ ಬಳಿಗಾರ ವಂದಿಸಿದರು.ಆರ್‌ಡಿಎ ಮಾಜಿ ಅಧ್ಯಕ್ಷ ಜಗನ್ನಾಥ ಕುಲಕರ್ಣಿ, ಎಪಿಎಂಸಿ ಉಪಾಧ್ಯಕ್ಷ ಬಾಬುರಾವ, ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಹರವಿ ನಾಗನಗೌಡ, ಆರ್‌ಡಿಎ 5 ಸದಸ್ಯರು, ನಗರಸಭೆ ನಾಮನಿರ್ದೇಶಿತ 6 ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಪಾಪಾರೆಡ್ಡಿಯವರೊಂದಿಗೆ ಕಾಂಗ್ರೆಸ್ ಸೇರಿದರು.

ಪ್ರತಿಕ್ರಿಯಿಸಿ (+)