ಭಾನುವಾರ, ಡಿಸೆಂಬರ್ 15, 2019
26 °C

ಪಜೆರೊ ಸ್ಪೋರ್ಟ್ಸ್ ಕಾರು ಗಡಸುತನದಲ್ಲೂ ಐಶಾರಾಮ

–ನೇಸರ. Updated:

ಅಕ್ಷರ ಗಾತ್ರ : | |

ಪಜೆರೊ ಸ್ಪೋರ್ಟ್ಸ್ ಕಾರು ಗಡಸುತನದಲ್ಲೂ ಐಶಾರಾಮ

ಜೆರೊ ಮತ್ತೆ ಮೇಲ್ದರ್ಜೆಗೇರುವ ಮೂಲಕ ಗಮನ ಸೆಳೆದಿದೆ. ಈಗ ಬಿಡುಗಡೆ ಆಗಿರುವುದು ವಾರ್ಷಿಕ ವಿಶೇಷದ ಕಾರ್ (ಆನಿವರ್ಸರಿ ಎಡಿಷನ್). ೨೦೧೩ ರಲ್ಲಿ ಬಿಡುಗಡೆ ಆದ ಪಜೆರೊಗೆ ಈಗ ಭಾರತದಲ್ಲಿ ಒಂದು ವರ್ಷ ಪೂರ್ಣಗೊಂಡ ಸಂಭ್ರಮ. ಈ ಸಂತಸದ ಹೊತ್ತನ್ನು ಬಳಸಿಕೊಂಡಿರುವ ಮಿಟ್ಸುಬಿಷಿ ಪ್ರಥಮ ವಾರ್ಷಿಕದ ವಿಶೇಷ ಪಜೆರೊವನ್ನು ಬಿಡುಗಡೆಗೊಳಿಸಿದೆ.

ಇದೀಗ ಮತ್ತಷ್ಟು ಗಟ್ಟಿಮುಟ್ಟಾಗಿದೆ, ಮತ್ತಷ್ಟು ಐಶಾರಾಮಿ ಸೌಲಭ್ಯಗಳನ್ನೂ ಒಳಗೊಂಡಿದೆ. ಬಿಬಿಸಿ ಸುದ್ದಿ ಸಂಸ್ಥೆಯ ಟಾಪ್ ಗಿಯರ್ ಮ್ಯಾಗಜೀನ್ ಈ ಕಾರ್‌ಗೆ ೨೦೧೨ ರ ಅತ್ಯುತ್ತಮ ಆಫ್ ರೋಡರ್ ಎಂಬ ಪ್ರಶಸ್ತಿಯನ್ನು ನೀಡಿರುವುದು ಕಂಪೆನಿಗೆ ಪ್ರೋತ್ಸಾಹ ಸಿಕ್ಕಂತಾಗಿ ಕಾರ್ ಅನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸಿ ಬಿಡುಗಡೆ ಮಾಡುವಂತೆ ಮಾಡಿದೆ.ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಈ ಹೊಸ ಕಾರ್‌ನ ಅನಾವರಣವಾಯಿತು. ಹಿಂದೂಸ್ತಾನ್ ಮೋಟಾರ್ಸ್‌ನ ಚೆನ್ನೈ ಉತ್ಪಾದನಾ ಘಟಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ವಿಜಯನ್ ಈ ಕಾರ್ ಅನಾವರಣಗೊಳಿಸಿದರು. ‘ಬೆಂಗಳೂರಿನಲ್ಲಿ ಈ ಕಾರ್ ಅನ್ನು ಬಿಡುಗಡೆಗೊಳಿಸುವುದಕ್ಕೆ ಸಂತಸವಾಗುತ್ತದೆ. ಬೆಂಗಳೂರಿನಲ್ಲಿ ಭಾರತದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಫ್ ರೋಡ್ ವಾಹನ ಚಾಲನೆಯ ಉತ್ಸಾಹಿಗಳಿದ್ದಾರೆ. ಹಾಗಾಗಿ ಮಿಟ್ಸುಬಿಷಿ ಪಜೆರೊ ಸ್ಪೋರ್ಟ್ಸ್ ವಾರ್ಷಿಕ ವಿಶೇಷದ ವಾಹನವನ್ನು ಸಂತಸದಿಂದ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು.ಮಿಟ್ಸುಬಿಷಿ ಕಂಪೆನಿಯ ವಾಹನಗಳು ಅವುಗಳ ಉತ್ಕೃಷ್ಟ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿವೆ. ಸಿಡಿಯಾ, ಲ್ಯಾನ್ಸರ್ ಕಾರ್‌ಗಳು ಭಾರತದಲ್ಲಿ ಮಿಟ್ಸುಬಿಷಿ ಕಂಪೆನಿಗೆ ನೆಲೆ ತಂದುಕೊಟ್ಟ ಕಾರ್‌ಗಳು. ಈ ಕಾರ್‌ಗಳು ಮುಂದೆ ಕಾಲಕ್ಕೆ ತಕ್ಕಂತೆ ಬದಲಾಗದೇ ಹೋದದ್ದು ಗ್ರಾಹಕನ ಮನಸ್ಸಿನಿಂದ ದೂರವಾಗಲು ಮುಖ್ಯ ಕಾರಣ. ಅದೀಗ ಇತಿಹಾಸದ ಪುಟ ಸೇರಿದ ವಿಚಾರ. ಆದರೆ ಅಚ್ಚರಿಯೆಂದರೆ ಇವತ್ತಿಗೂ ಈ ಕಾರ್‌ಗಳು ಉತ್ಪಾದನೆಯಲ್ಲಿವೆ. ಮುಖ್ಯವಾಗಿ ಸ್ಪೋರ್ಟ್ಸ್ ವಾಹನ ಕ್ಷೇತ್ರದಲ್ಲಿ ಇವುಗಳ ಬಳಕೆ ಹೆಚ್ಚು. ಇವತ್ತಿಗೂ ರ್‍ಯಾಲಿಯಲ್ಲಿ ಇವನ್ನು ಬಳಸಿಕೊಳ್ಳುವುದು ಅತಿ ಹೆಚ್ಚು.ಇದೇ ಮಿಟ್ಸುಬಿಷಿ ಪಜೆರೊ ಮೊದಲು ಉತ್ಪಾದನೆಯಾಗಿದ್ದು ೧೯೮೨ ರಲ್ಲಿ. ಜಪಾನ್‌ನ ಟೋಕಿಯೊದಲ್ಲಿ  ತಯಾರಾದ ಈ ಎಸ್‌ಯುವಿ (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ಭಾರತಕ್ಕೆ ಕಾಲಿಟ್ಟಿದ್ದು ತೀರಾ ಇತ್ತೀಚೆಗೆ. ವಿದೇಶಿ ಕಾರ್ ಕಂಪೆನಿಗಳಿಗೆ ಭಾರತ ಒಂದು ರೀತಿಯಲ್ಲಿ ಹಳೆಯ ಕಾರ್‌ಗಳನ್ನು ಮಾರುವ, ಕಡಿಮೆ ಮೌಲ್ಯವುಳ್ಳ ಮಾರುಕಟ್ಟೆಯಾಗಿದೆ. ಹಳೆಯ ಕಾರ್‌ಗಳನ್ನು ಇಲ್ಲಿಗೆ ತಂದು ಮಾರುವು­ದುಂಟು.

ಈ ಟ್ರೆಂಡ್ ಬಹುತೇಕ ಎಲ್ಲ ಕಂಪೆನಿಗಳಿಂದ ಅಳವಡಿಸಲ್ಪಟ್ಟಿದೆ. ಅದೇ ರೀತಿ ಪಜೆರೊ ಸಹ ಭಾರತಕ್ಕೆ ಕಾಲಿಟ್ಟಿದ್ದು. ಆದರೆ ಎಸ್‌ಯುವಿಯಾಗಿ ಅತಿ ಹೆಚ್ಚು ಬದಲಾವಣೆ ಅಳವಡಿಸಿಕೊಂಡ ಅತಿ ಪ್ರಮುಖ ವಾಹನವಾಗಿ ಪಜೆರೊ ಅಚ್ಚರಿ ಮೂಡಿಸುತ್ತದೆ. ಪಜೆರೊ ಆರಂಭದಲ್ಲಿ ಕೇವಲ ಪಜೆರೊ ಆಗಿ, ನಂತರ ಪಜೆರೊ ಸ್ಪೋರ್ಟ್ಸ್ ಆಗಿ ಬಿಡುಗಡೆಗೊಂಡಿತು.ಹೊಸಕಾರಿನ ಹೊಸತನ

ಹೊಸ ಕಾರ್‌ನಲ್ಲಿ ಅನೇಕ ವಿಶೇಷಗಳಿವೆ. ಆದರೆ ಇವ್ಯಾವೂ ಮೂಲಭೂತ ಮಟ್ಟದ ಬದಲಾವಣೆಗಳಲ್ಲ. ಎಂಜಿನ್ ಹಾಗೂ ಅದರ ಶಕ್ತಿ-ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ಮುಖ್ಯವಾಗಿ ಟಚ್ ಸ್ಕ್ರೀನ್ ಇರುವ ಆಡಿಯೊ ಸಿಸ್ಟಂ ಅನ್ನು ಅಳವಡಿಸಿಕೊಳ್ಳಲಾಗಿದೆ. ಜತೆಗೆ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂನ (ಜಿಪಿಎಸ್) ಸಹಾಯವಿದೆ. ಹಿಂದಿನ ದೃಶ್ಯ ಕಾಣಲು ಕ್ಯಾಮೆರಾ ನೀಡಲಾಗಿದೆ.ದೇಹದ ಬಣ್ಣದ ಬಂಪರ್‌ಗಳು, ಮಡ್‌ಗಾರ್ಡ್ ಇರುವುದು ಹೊಸ ಸೇರ್ಪಡೆ. ಜತೆಗೆ ವಾರ್ಷಿಕ ವಿಶೇಷ ಸಂಚಿಕೆ (ಆನಿವರ್ಸರಿ ಎಡಿಷನ್) ಎಂಬ ಮುದ್ರೆಯನ್ನು ಕಾರ್‌ನ ಇಕ್ಕೆಲಗಳಲ್ಲಿ ಅಳವಡಿಸಿರುವುದು ವಿಶೇಷ. ಜತೆಗೆ, ಇದೇ ಮೊದಲ ಬಾರಿಗೆ ಪಜೆರೊದಲ್ಲಿ ಡ್ರೈವಿಂಗ್ ಸಿಸ್ಟಂಗೆ ಆಯ್ಕೆಯ ಅವಕಾಶ ನೀಡಲಾಗಿದೆ.

೪ ವ್ಹೀಲ್ ಡ್ರೈವ್‌ನ ಅದ್ಭುತ ಶಕ್ತಿಯ ಜತೆಗೆ ೪ ಮತ್ತು ೨ ವ್ಹೀಲ್ ಡ್ರೈವ್‌ನ ಅವಕಾಶವನ್ನು ನೀಡಿರುವುದು ಕಾರ್‌ಗೆ ಹೆಚ್ಚಿನ ಮೈಲೇಜ್ ಅನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಬಲಿಷ್ಠ ಟಯರ್‌ಗಳನ್ನು ನೀಡಿರುವ ಕಾರಣ, ಎಂತಹ ಕೆಟ್ಟ ರಸ್ತೆಯಲ್ಲೂ ಸರಾಗವಾಗಿ ಚಾಲನೆ ಮಾಡಬಲ್ಲ ಸಾಮರ್ಥ್ಯವನ್ನು ಹೊಸ ಪಜೆರೊ ಸ್ಪೋರ್ಟ್ಸ್ ಹೊಂದಿದೆ.

ತಾಂತ್ರಿಕ ವಿವರ

ಉದ್ದ: ೪೭೫೫ ಎಂಎಂ

ಅಗಲ: ೧೭೭೫ ಎಂಎಂ

ಎತ್ತರ: ೧೯೦೦ ಎಂಎಂ

ವ್ಹೀಲ್‌ಬೇಸ್: ೨೭೨೫ ಎಂಎಂ

ಗ್ರೌಂಡ್ ಕ್ಲಿಯರೆನ್ಸ್: ೨೦೫ ಎಂಎಂ

ನಿವ್ವಳ ತೂಕ: ೨೮೦೦ ಎಂಎಂ

ಸೀಟಿಂಗ್ ಸಾಮರ್ಥ್ಯ:

ಎಂಜಿನ್: ೨೮೩೫ ಸಿಸಿ ಡೀಸೆಲ್ ಎಂಜಿನ್

ಬಿಎಚ್‌ಪಿ: ೧೧೮ ಪಿಎಸ್ (೪೦೦೦ ಆರ್‌ಪಿಎಂ)

ಟಾರ್ಕ್: ೨೯೨ ಎನ್‌ಎಂ (೨೦೦೦ ಆರ್‌ಪಿಎಂ)

ಕನಿಷ್ಠ ತಿರುಗುವ ವ್ಯಾಸ: ೫.೯ ಮೀಟರ್

ಗಿಯರ್ ಬಾಕ್ಸ್: ೫ ಸ್ಪೀಡ್ ಮ್ಯಾನ್ಯುಯಲ್, ೪ ಸ್ಪೀಡ್, ೨ ಸ್ಪೀಡ್ ಅವಕಾಶ.

ಪ್ರತಿಕ್ರಿಯಿಸಿ (+)