ಮಂಗಳವಾರ, ಏಪ್ರಿಲ್ 20, 2021
29 °C

ಪಟಾಕಿ ಇಲ್ಲದೆ ದೀಪಾವಳಿ ಆಚರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾದೇಶಿಕ ಕೇಂದ್ರದ ವಿದ್ಯಾರ್ಥಿಗಳು ಪಟಾಕಿ ಇಲ್ಲದೆ ದೀಪಾವಳಿ ಆಚರಣೆ ಮಾಡುವ ಕುರಿತು ಬುಧವಾರ ನಗರದ ವಿವಿಧ ಬಡಾವಣೆಗಳಲ್ಲಿ ಜನಜಾಗೃತಿ ನಡಿಗೆ ನಡೆಸಿದರು.ಪಟಾಕಿಗಳನ್ನು ಬಳಸುವುದರಿಂದ ಪರಿಸರದ ಮೇಲೆ ಆಗುವಂಥ ವ್ಯತಿರಿಕ್ತ ಪರಿಣಾಮಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಈ ಜನಜಾಗೃತಿ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ವಿಟಿಯು ಪ್ರಾದೇಶಿಕ ಕೇಂದ್ರ ಸಂಯೋಜಕ ಡಾ. ಪ್ರವೀಣ್ ವಿ. ಹೊನಗುಂಟಿಕರ್ ತಿಳಿಸಿದರು.ದೀಪಾವಳಿ ಹಬ್ಬ ಸಮೀಪಿಸುತ್ತಿರುವುದರಿಂದ ಸಾರ್ವಜನಿಕರು ಪರಿಸರ ಸ್ನೇಹಿ, ವಾತಾವರಣವನ್ನು ಕಾಪಾಡುವಲ್ಲಿ ಜಾಗೃತಿ ವಹಿಸುವಂತೆ ಹಾಗೂ ಪಟಾಕಿ ಬಳಸದೇ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುವಂತೆ ಹೇಳಿದರು.ಜನಜಾಗೃತಿ ಕಾರ್ಯಕ್ರಮವು ವಿಟಿಯು ಕೇಂದ್ರದಿಂದ ಆರಂಭವಾಗಿ ದಂತ ಕಾಲೇಜು, ಖರ್ಗೆ ಪೆಟ್ರೋಲ ಪಂಪ್, ಓಂ ನಗರಗಳ ಮೂಲಕ ಸಂಚರಿಸಿ, ಪುನಃ  ಮಹಾವಿದ್ಯಾಲಯ ಆವರಣಕ್ಕೆ ಬಂದು ತಲುಪಿತು.

ಜಾಗೃತ ರ‌್ಯಾಲಿಯಲ್ಲಿ ಡಾ. ಆರ್. ಹರೀಶ್, ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.