ಪಟಾಕಿ ಗೋಧಾಮಿಗೆ ಬೆಂಕಿ: ಐವರ ದುರ್ಮರಣ

7

ಪಟಾಕಿ ಗೋಧಾಮಿಗೆ ಬೆಂಕಿ: ಐವರ ದುರ್ಮರಣ

Published:
Updated:
ಪಟಾಕಿ ಗೋಧಾಮಿಗೆ ಬೆಂಕಿ: ಐವರ ದುರ್ಮರಣ

ಸೇಲಂ (ಪಿಟಿಐ): ತಮಿಳುನಾಡಿನ ಮೆಟ್ಟೂರಿನ ಬಳಿ ಪಟಾಕಿ ಗೋಧಾಮಿಗೆ ಬೆಂಕಿ ತಗುಲಿದ  ಪರಿಣಾಮ ಐವರು ಕಾರ್ಮಿಕರು ಸಜೀವ ದಹನಗೊಂಡಿರುವ  ಘಟನೆ ಮಂಗಳವಾರ ನಡೆದಿದೆ.

ಮೆಟ್ಟೂರು ಸಮೀಪದ ಪರಾಕಲ್ಲೂರು ಗ್ರಾಮದ ಬಳಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಐವರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆ ಇನ್ನು ಹೆಚ್ಚುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಮೆಟ್ಟೂರಿನ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry