ಪಟಾಕಿ ಮಳಿಗೆ ಪರವಾನಗಿಗೆ ಅರ್ಜಿ ಆಹ್ವಾನ

7

ಪಟಾಕಿ ಮಳಿಗೆ ಪರವಾನಗಿಗೆ ಅರ್ಜಿ ಆಹ್ವಾನ

Published:
Updated:

ಬೆಂಗಳೂರು:  ದೀಪಾವಳಿ ಹಬ್ಬದ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯ ಮೈದಾನಗಳಲ್ಲಿ ಪಟಾಕಿ ಮಳಿಗೆಗಳಿಗೆ ಪರವಾನಗಿ ನೀಡಲು ಪೊಲೀಸ್ ಇಲಾಖೆಯು ಅರ್ಜಿ ಆಹ್ವಾನಿಸಿದೆ.ಮೈಸೂರು ರಸ್ತೆಯಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆ ಕೇಂದ್ರ ವಿಭಾಗದ ಡಿಸಿಪಿ ಕಚೇರಿಯಲ್ಲಿ ಅರ್ಜಿ ಪಡೆಯಬಹುದು. ಬಳಿಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಡಿಜಿಪಿ ಅಥವಾ ನಿರ್ದೇಶಕರ ಕಚೇರಿಗೆ ಸಂದಾಯವಾಗುವಂತೆ ಎರಡು ಸಾವಿರ ರೂಪಾಯಿಯ ಡಿಮಾಂಡ್ ಡ್ರಾಫ್ಟ್ (ಡಿ.ಡಿ) ತೆಗೆಯಬೇಕು. ಜತೆಗೆ ನಗರ ಪೊಲೀಸ್ ಕಮಿಷನರ್ ಕಚೇರಿಗೆ ಸಂದಾಯವಾಗುವಂತೆಯೂ ಒಂದು ಸಾವಿರ ರೂಪಾಯಿ ಮೊತ್ತದ ಡಿ.ಡಿ ಪಡೆಯಬೇಕು ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಡಿ.ಡಿ ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಅ.26ರಿಂದ ಅ.30ರೊಳಗೆ ಡಿಸಿಪಿ ಕಚೇರಿಗೆ ಸಲ್ಲಿಸಿ ಸ್ವೀಕೃತಿಪತ್ರ ಪಡೆಯಬೇಕು. ಅರ್ಜಿದಾರರು ಇತ್ತೀಚಿನ 2 ಭಾವಚಿತ್ರಗಳು, ಪಡಿತರ ಚೀಟಿಯ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry